ಮೊದಲ ತೆಲುಗು ಸಿನಿಮಾ ಶೂಟಿಂಗ್​ ಮುನ್ನವೇ ತಮಿಳಿನಲ್ಲಿ ಅವಕಾಶ ಬಾಚಿಕೊಂಡ ತೃಪ್ತಿ

24 June 2025

By  Manjunatha

‘ಅನಿಮಲ್’ ಸಿನಿಮಾ ಮೂಲಕ ಸ್ಟಾರ್ ಆಗಿರುವ ನಟಿ ತೃಪ್ತಿ ದಿಮ್ರಿ. ಅವರಿಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿದೆ.

          ನಟಿ ತೃಪ್ತಿ ದಿಮ್ರಿ

ಬಾಲಿವುಡ್ ನಟಿ ತೃಪ್ತಿ ದಿಮ್ರಿ, ಇದೇ ಮೊದಲ ಬಾರಿಗೆ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ ಅದೂ ಪ್ರಭಾಸ್ ಜೊತೆಗೆ.

ತೆಲುಗು ಸಿನಿಮಾನಲ್ಲಿ ತೃಪ್ತಿ

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾನಲ್ಲಿ ತೃಪ್ತಿ ದಿಮ್ರಿ, ಪ್ರಭಾಸ್ ಎದುರು ನಾಯಕಿ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.

ಪ್ರಭಾಸ್ ನಟನೆಯ ‘ಸ್ಪಿರಿಟ್’

‘ಸ್ಪಿರಿಟ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಚಾಲ್ತಿಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭ ಆಗುವ ಸಾಧ್ಯತೆ ಇದೆ.

ವರ್ಷಾಂತ್ಯಕ್ಕೆ ಚಿತ್ರೀಕರಣ

ಆದರೆ ಅದಾಗಲೇ ನಟಿ ತೃಪ್ತಿ ದಿಮ್ರಿಗೆ ನೆರೆಯ ತಮಿಳು ಚಿತ್ರರಂಗದಿಂದ ಅವಕಾಶ ಒಂದು ಅರಸಿ ಬಂದಿದೆಯಂತೆ.

   ತಮಿಳು ಚಿತ್ರರಂಗದಿಂದ

ತಮಿಳಿನ ದೊಡ್ಡ ಬಜೆಟ್​ನ ಸ್ಟಾರ್ ನಟನ ಸಿನಿಮಾ ಒಂದಕ್ಕೆ ತೃಪ್ತಿಯನ್ನು ನಾಯಕಿಯಾಗಿ ಕೇಳಲಾಗಿದೆ.

     ಸ್ಟಾರ್ ನಟನ ಸಿನಿಮಾ

ಸೂರ್ಯ ನಟಿಸಲಿರುವ ಹೊಸ ಸಿನಿಮಾನಲ್ಲಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ಖಾತ್ರಿ ಆಗಿಲ್ಲ.

  ಸೂರ್ಯ ಜೊತೆ ಸಿನಿಮಾ

ತೃಪ್ತಿ ದಿಮ್ರಿ ಪ್ರಸ್ತುತ ಹಲವು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಈಗ ಮೂರು ಹಿಂದಿ ಸಿನಿಮಾಗಳಿವೆ.

     ಹಿಂದಿ ಸಿನಿಮಾಗಳಲ್ಲಿ