ದಕ್ಷಿಣದಲ್ಲಿ ಮತ್ತೊಬ್ಬ ಸ್ಟಾರ್ ನಟನಿಗೆ ಜೋಡಿ ಆಗಲಿರುವ ತೃಪ್ತಿ ದಿಮ್ರಿ

19 AUG 2026

By  Manjunatha

ತೃಪ್ತಿ ದಿಮ್ರಿ, ಬಾಲಿವುಡ್​ನ ಸ್ಟಾರ್ ನಟಿ. ‘ಅನಿಮಲ್’ ಸಿನಿಮಾದ ಸಣ್ಣ ಸೀನ್​​ ಇಂದಾಗಿ ದೊಡ್ಡ ಖ್ಯಾತಿಯನ್ನು ಗಳಿಸಿದವರು ಅವರು.

  ಬಾಲಿವುಡ್​ನ ಸ್ಟಾರ್ ನಟಿ

‘ಅನಿಮಲ್’ ಸಿನಿಮಾದ ಬಳಿಕ ಹಲವು ದೊಡ್ಡ ಅವಕಾಶಗಳು ತೃಪ್ತಿ ದಿಮ್ರಿಯನ್ನು ಅರಸಿ ಬಂದಿವೆ.

     ‘ಅನಿಮಲ್’ ಸಿನಿಮಾ

ಇದೀಗ ‘ಸ್ಪಿರಿಟ್’ ಸಿನಿಮಾನಲ್ಲಿ ಸ್ಟಾರ ನಟ ಪ್ರಭಾಸ್ ಎದುರು ನಾಯಕಿ ಪಾತ್ರದಲ್ಲಿ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ.

ಪ್ರಭಾಸ್ ಎದುರು ನಾಯಕಿ

‘ಅನಿಮಲ್’ ನಿರ್ದೇಶಿಸಿದ್ದ ಸಂದೀಪ್ ರೆಡ್ಡಿ ವಂಗಾ ಅವರೇ ‘ಸ್ಪಿರಿಟ್’ ಸಿನಿಮಾಕ್ಕೂ ನಿರ್ದೇಶಕ.

    ಸಂದೀಪ್ ರೆಡ್ಡಿ ವಂಗಾ

ಇದೀಗ ತೃಪ್ತಿ ದಿಮ್ರಿಗೆ ಮತ್ತೊಂದು ದಕ್ಷಿಣದ ಸಿನಿಮಾ ಸಿಕ್ಕಿದ್ದು, ಸ್ಟಾರ್ ನಟನ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ.

ಮತ್ತೊಂದು ದಕ್ಷಿಣದ ಚಿತ್ರ

ಆದರೆ ಈ ಬಾರಿ ಅವರು ತಮಿಳಿನ ಸ್ಟಾರ್ ನಟನ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

     ತಮಿಳಿನ ಸ್ಟಾರ್ ನಟ

ತೃಪ್ತಿ ದಿಮ್ರಿ ಅವರು ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಲಿರುವ ಹೊಸ ಸಿನಿಮಾಕ್ಕೆ ನಾಯಕಿ ಆಗಲಿದ್ದಾರಂತೆ.

ಹೊಸ ಸಿನಿಮಾಕ್ಕೆ ನಾಯಕಿ

ತೃಪ್ತಿ ದಿಮ್ರಿ ಪ್ರಸ್ತುತ ಕೆಲವು ಹಿಂದಿ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ಜೊತೆಗೆ ‘ಸ್ಪಿರಿಟ್’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ.

   ‘ಸ್ಪಿರಿಟ್’ ಸಿನಿಮಾನಲ್ಲೂ