ತಮಿಳುನಾಡು ದೇವಾಲಯಕ್ಕೆ ರೋಬೊ ಆನೆ ಉಡುಗೊರೆ ಕೊಟ್ಟ ತ್ರಿಷಾ ಕೃಷ್ಣನ್

29 June 2025

By  Manjunatha

ನಟಿ ತ್ರಿಷಾ ಕೃಷ್ಣನ್ ದಶಕಗಳಿಂದ ಚಿತ್ರರಂಗದಲ್ಲಿದ್ದರೂ ಇಂದಿಗೂ ಸಹ ಬೇಡಿಕೆ ಕಡಿಮೆ ಆಗಿಲ್ಲ.

       ನಟಿ ತ್ರಿಷಾ ಕೃಷ್ಣನ್

ಈಗಲೂ ಸಹ ನಟಿ ತ್ರಿಷಾ ಕೃಷ್ಣನ್ ಅವರ ಕೈಯಲ್ಲಿ ಕನಿಷ್ಟ ನಾಲ್ಕು ಸಿನಿಮಾಗಳು ಇವೆ.

  ಕನಿಷ್ಟ ನಾಲ್ಕು ಸಿನಿಮಾ

ತ್ರಿಷಾ ಕೃಷ್ಣನ್ ನಟಿಯಾಗಿರುವ ಜೊತೆಗೆ ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಕೆಲ ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ.

 ಪ್ರಾಣಿ ಪ್ರೇಮಿ ತ್ರಿಷಾ ಕೃಷ್ಣ

ತ್ರಿಷಾ ಕೃಷ್ಣನ್ ದೈವ ಭಕ್ತೆಯೂ ಆಗಿದ್ದು, ಇತ್ತೀಚೆಗಷ್ಟೆ ತಮಿಳುನಾಡಿನ ದೇವಾಲಯವೊಂದಕ್ಕೆ ರೋಬೊ ಆನೆಯನ್ನು ನೀಡಿದ್ದಾರೆ.

 ದೈವ ಭಕ್ತೆ ತ್ರಿಷಾ ಕೃಷ್ಣನ್

ತಮಿಳುನಾಡಿನ ಅರಪ್ಪುಕೊಟ್ಟೈನಲ್ಲಿರುವ ಶ್ರೀ ಅಷ್ಟಲಿಂಗ ಆದಿಶೇಷ ಸೆಲ್ವ ವಿನಾಯಕರ್‌ ದೇವಾಲಯಕ್ಕೆ ಆನೆ ನೀಡಿದ್ದಾರೆ.

       ಕಾಣಿಕೆಯಾಗಿ ಆನೆ 

ಅದರ ಜೊತೆಗೆ ಶ್ರೀ ಅಷ್ಟಭುಜ ಆದಿಶೇಷ ವರಾಹಿ ಅಮ್ಮನ್‌ ದೇವಾಲಯಕ್ಕೆ ಸಹ ಯಾಂತ್ರಿಕ ಆನೆ ನೀಡಿದ್ದಾರೆ.

   ಎರಡು ಆನೆ ನೀಡಿದ್ದಾರೆ

ತ್ರಿಷಾ ಕೃಷ್ಣನ್ ದೈವ ಭಕ್ತೆ ಆಗಿದ್ದು, ದೇವಾಲಯಗಳಿಗೆ, ಚರ್ಚುಗಳಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ.

   ದೇವಾಲಯಗಳಿಗೆ ಭೇಟಿ

ಅವರ ಸಹನಟ ಹೇಳಿದ್ದಂತೆ ಪ್ರತಿದಿನವೂ ಸಹ ಬೈಬಲ್ ಅನ್ನು ಓದದೆ ಅವರು ಮಲಗುವುದೇ ಇಲ್ಲವಂತೆ.

ಪ್ರತಿದಿನವೂ ಸಹ ಬೈಬಲ್