ತ್ರಿಷಾ ನಟನೆಯ ಸತತ ಐದು ಸಿನಿಮಾಗಳು ಫ್ಲಾಪ್! ಯಾವುವವು?

15 June 2025

By  Manjunatha

ನಟಿ ತ್ರಿಷಾ ಕೃಷ್ಣನ್ ದಕ್ಷಿಣ ಭಾರತ ಚಿತ್ರರಂಗದ ಬಲು ಜನಪ್ರಿಯ ನಟಿ, ಪ್ಯಾನ್ ಇಂಡಿಯಾ ನಟಿ ಸಹ ಹೌದು.

  ದಕ್ಷಿಣ ಭಾರತ ಚಿತ್ರರಂಗ

ಒಂದು ಸಮಯದಲ್ಲಿ ತ್ರಿಷಾ ನಟಿಸಿರುವ ಸಿನಿಮಾಗಳು ಒಂದರ ಹಿಂದೊಂದರಂತೆ ಗೆಲುವು ಸಾಧಿಸುತ್ತಿದ್ದವು.

     ಅಂದೊಂದಿತ್ತು ಕಾಲ

ತೆಲುಗು, ತಮಿಳು ಭಾಷೆಯ ಸ್ಟಾರ್ ನಟರಿಗೂ ಸಹ ತ್ರಿಷಾ ಕೃಷ್ಣನ್ ಅವರೇ ನಾಯಕಿಯಾಗಿ ಬೇಕಾಗಿತ್ತು.

 ತ್ರಿಷಾ ಬೇಕಿತ್ತು ಎಲ್ಲರಿಗೂ

ಈಗ ತ್ರಿಷಾ ನಟಿಸಿರುವ ಐದು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ ಎನ್ನುತ್ತಿವೆ ಲೆಕ್ಕಗಳು.

    ತ್ರಿಷಾಗೆ ಸತತ ಸೋಲು

ದಳಪತಿ ವಿಜಯ್ ನಟನೆಯ ‘ಗೋಟ್’ ಕಲೆಕ್ಷನ್ ಮಾಡಿತಾದರೂ ಸಿನಿಮಾ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಲ್ಲ. ವಿಜಯ್ ಜೊತೆ ವಿಶೇಷ ಹಾಡಿನಲ್ಲಿ ತ್ರಿಷಾ ನಟಿಸಿದ್ದರು.

  ದಳಪತಿ ವಿಜಯ್ ಗೋಟ್

ಮಲಯಾಳಂನ ಐಡೆಂಟಿಟಿ ಹೆಸರಿನ ಸಿನಿಮಾನಲ್ಲಿ ತ್ರಿಷಾ ನಟಿಸಿದರು. ಥ್ರಿಲ್ಲರ್ ಸಿನಿಮಾ ಅಷ್ಟೇನೂ ಒಳ್ಳೆಯ ಕಲೆಕ್ಷನ್ ಮಾಡಲಿಲ್ಲ.

ಮಲಯಾಳಂನ ಐಡೆಂಟಿಟಿ

ಅಜಿತ್ ಕುಮಾರ್ ನಟನೆಯ ‘ವಿದುಮಯಾರ್ಚಿ’ ಸಿನಿಮಾನಲ್ಲಿ ತ್ರಿಷಾ ನಟಿಸಿದರು. ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿತು.

 ಅಜಿತ್ ‘ವಿದುಮಯಾರ್ಚಿ’

ಮತ್ತೆ ಅಜಿತ್ ಜೊತೆಗೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಸಹ ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿತು.

ಗುಡ್ ಬ್ಯಾಡ್ ಅಗ್ಲಿ ಸಿನಿಮಾ

ಕಮಲ್ ಹಾಸನ್ ಜೊತೆಗೆ ‘ಥಗ್ ಲೈಫ್’ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಅಂತು ನೆಲಕಚ್ಚಿಬಿಟ್ಟಿದೆ.

 ಈಗ ‘ಥಗ್ ಲೈಫ್’ ಸಿನಿಮಾ