ಬೆಟ್ಟಿಂಗ್​​ ಅಪ್ಲಿಕೇಶನ್​​ ಜೊತೆ ಲಿಂಕ್, ಸಂಕಷ್ಟದಲ್ಲಿ ನಟಿ ಊರ್ವಶಿ ರೌಟೆಲಾ

14 SEP 2025

By  Manjunatha

ಊರ್ವಶಿ ರೌಟೆಲಾ, ತಮ್ಮ ನಟನೆಗಿಂತಲೂ ಗ್ಲಾಮರ್ ಮತ್ತು ಮಾದಕ ನೃತ್ಯದಿಂದ ಗಮನ ಸೆಳೆಯುವುದು ಹೆಚ್ಚು.

   ನಟಿ ಊರ್ವಶಿ ರೌಟೆಲಾ

ತಮ್ಮನ್ನು ತಾವು ಭಾರತದ ಸ್ಟಾರ್ ನಟಿ ಎಂದು ಕರೆದುಕೊಳ್ಳುವ ಊರ್ವಶಿ ರೌಟೆಲಾ ಆಗಾಗ್ಗೆ ಹಾಸ್ಯಕ್ಕೆ ಗುರಿ ಆಗುತ್ತಿರುತ್ತಾರೆ.

     ಭಾರತದ ಸ್ಟಾರ್ ನಟಿ

ಫ್ಯಾಷನ್ ಶೋಗಳಲ್ಲಿ, ಸಿನಿಮಾ ಉತ್ಸವಗಳಲ್ಲಿ ಗ್ಲಾಮರಸ್ ಬಟ್ಟೆಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳುತ್ತಾರೆ.

      ಫ್ಯಾಷನ್ ಶೋಗಳಲ್ಲಿ

ಇವುಗಳ ಜೊತೆಗೆ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ಅಥವಾ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

      ಐಟಂ ಹಾಡುಗಳಲ್ಲಿ

ಇದೀಗ ಊರ್ವಶಿ ರೌಟೆಲಾಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಕರೆದಿದ್ದಾರೆ.

      ಸಮನ್ಸ್ ಜಾರಿ ಆಗಿದೆ

1ಎಕ್ಸ್ ಬೆಟ್ ಹೆಸರಿನ ಬೆಟ್ಟಿಂಗ್ ಅಪ್ಲಿಕೇಶನ್​ ತನಿಖೆ ಸಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಊರ್ವಶಿಗೆ ಸಮನ್ಸ್ ಹೋಗಿದೆ.

     ಬೆಟ್ಟಿಂಗ್ ಅಪ್ಲಿಕೇಶನ್

ಊರ್ವಶಿ ರೌಟೆಲಾ ಅವರು ಸೆಪ್ಟೆಂಬರ್ 16 ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕಿದೆ.

      ಅಧಿಕಾರಿಗಳ ಮುಂದೆ

ಊರ್ವಶಿ ರೌಟೆಲಾಗೆ ಈ ಹಿಂದೆಯೂ ಸಹ ಬೆಟ್ಟಿಂಗ್ ಅಪ್ಲಿಕೇಶನ್​​ಗೆ ಸಂಬಂಧಿಸಿದಂತೆ ನೊಟೀಸ್ ನೀಡಲಾಗಿತ್ತು.

    ಬೆಟ್ಟಿಂಗ್ ಅಪ್ಲಿಕೇಶನ್​​ಗೆ