ಮೊದಲ ಕರ್ವಾ ಚೌತ್ ಆಚರಿಸಿದ ನಟಿ ವೈಷ್ಣವಿ ಗೌಡ: ಚಿತ್ರಗಳ ನೋಡಿ

13 OCT 2025

By  Manjunatha

ವೈಷ್ಣವಿ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

        ನಟಿ ವೈಷ್ಣವಿ ಗೌಡ

ವೈಷ್ಣವಿ ಗೌಡ ಇತ್ತೀಚೆಗಷ್ಟೆ ವಿವಾಹವಾಗಿದ್ದು, ಇದೀಗ ಮೊದಲ ಕರ್ವಾ ಚೌತ್ ವೃತ್ತವನ್ನು ಆಚರಣೆ ಮಾಡಿದ್ದಾರೆ.

   ಮೊದಲ ಕರ್ವಾ ಚೌತ್

ಅಸಲಿಗೆ ಕರ್ವಾ ಚೌತ್ ಉತ್ತರ ಭಾರತದಲ್ಲಿ ಆಚರಿಸಲಾಗುವ ವೃತವಾಗಿದೆ. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಜನಪ್ರಿಯವಾಗುತ್ತಿದೆ.

     ಉತ್ತರ ಭಾರತದ ಹಬ್ಬ

ಪತಿಯ ಏಳ್ಗೆಗಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಚಂದ್ರನ ಜೊತೆಗೆ ಪತಿಯನ್ನು ನೋಡುವ ಆಚರಣೆ ಇದು.

ಪತಿಯ ಏಳ್ಗೆಗಾಗಿ ಪತ್ನಿ ವೃತ

ವೈಷ್ಣವಿ ಗೌಡ ಅವರ ಪತಿ ಅನುಕೂಲ್ ಮಿಶ್ರಾ ಉತ್ತರ ಭಾರತದ ಮೂಲದವರಾಗಿರುವ ಕಾರಣ ಈ ವೃತ ಆಚರಿಸಿದ್ದಾರೆ ವೈಷ್ಣವಿ.

   ಪತಿ ಅನುಕೂಲ್ ಮಿಶ್ರಾ

ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಅವರು ಇದೇ ವರ್ಷ ಜೂನ್ ತಿಂಗಳಲ್ಲಿ ಬಲು ಅದ್ಧೂರಿಯಾಗಿ ಮದುವೆ ಆದರು.

 ಜೂನ್ ತಿಂಗಳಲ್ಲಿ ವಿವಾಹ

ವೈಷ್ಣವಿ ಗೌಡ ಅವರ ಪತಿ ಅನುಕೂಲ್ ಮಿಶ್ರಾ ಉತ್ತರ ಪ್ರದೇಶ ಮೂಲದವರಾಗಿದ್ದು, ಏರ್​​ಫೋರ್ಸ್​​ನ ಅಧಿಕಾರಿ ಆಗಿದ್ದಾರೆ.

 ಉತ್ತರ ಪ್ರದೇಶದ ಮೂಲ

ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಅರೇಂಜ್ ಮ್ಯಾರೇಜ್ ಆಗಿದೆ. ಮ್ಯಾಟ್ರೊಮೋನಿ ಸೈಟ್ ಮೂಲಕ ಇಬ್ಬರ ಪರಿಚಯ ಆಗಿತ್ತು.

      ಅರೇಂಜ್ ಮ್ಯಾರೇಜ್