1.50 ಕೋಟಿ ಬೆಲೆಯ ಕಾರನ್ನು ಉಡುಗೊರೆಯಾಗಿ ಪಡೆದ ನಟಿ

23 July 2025

By  Manjunatha

ನಟಿ ವರಲಕ್ಷ್ಮಿ ಶರತ್​ಕುಮಾರ್, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿದ್ದಾರೆ.

 ವರಲಕ್ಷ್ಮಿ ಶರತ್​ಕುಮಾರ್

ಖ್ಯಾತ ನಟ ಶರತ್​ಕುಮಾರ್ ಪುತ್ರಿ ಆಗಿರುವ ವರಲಕ್ಷ್ಮಿ, ಕನ್ನಡದ ‘ರನ್ನ’, ‘ಮಾಣಿಕ್ಯ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

     ಶರತ್​ಕುಮಾರ್ ಪುತ್ರಿ

ವರಲಕ್ಷ್ಮಿ ಶರತ್​ಕುಮಾರ್ ಅವರು ನಿಕೋಲಸ್ ಸಚ್​ದೇವ್ ಎಂಬುವರನ್ನು ಕಳೆದ ವರ್ಷ ವಿವಾಹವಾದರು.

ಪತಿ ನಿಕೋಲಸ್ ಸಚ್​ದೇವ್

ಇದೀಗ ವಿವಾಹ ವಾರ್ಷಿಕೋತ್ಸವಕ್ಕೆ ವರಲಕ್ಷ್ಮಿಗೆ ಪತಿ ನಿಕೋಲಸ್ 1.52 ಕೋಟಿ ಬೆಲೆಯ ಕಾರು ಉಡುಗೊರೆ ನೀಡಿದ್ದಾರೆ.

 ವಿವಾಹ ವಾರ್ಷಿಕೋತ್ಸವ

ವರಲಕ್ಷ್ಮಿ ಅವರ ಮೆಚ್ಚಿನ ಪಿಂಕ್ ಬಣ್ಣದ ಪೋರ್ಶೆ 719 ಬಾಕ್ಸ್ಟರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಪೋರ್ಶೆ 719 ಬಾಕ್ಸ್ಟರ್

ನಿಕೋಲಸ್ ಸಚ್​​ದೇವ್ ಮುಂಬೈನವರಾಗಿದ್ದು ಅವರೊಬ್ಬ ಗ್ಯಾಲರಿಸ್ಟ್, ದುಬಾರಿ ಆರ್ಟ್​ ಅನ್ನು ಮಾರಾಟ ಮಾಡುತ್ತಾರೆ.

 ಗ್ಯಾಲರಿಯನ್ ನಿಕೋಲಸ್

ವರಲಕ್ಷ್ಮಿ ಅವರ ಕಾರು ಭಾರತದ ಅತ್ಯಂತ ವೇಗವಾದ, ಶಕ್ತಿಯುತ ಕಾರುಗಳಲ್ಲಿ ಒಂದಾಗಿದೆ.

  ಶಕ್ತಿಯುತ ಕಾರು ಪೋರ್ಶೆ

ವರಲಕ್ಷ್ಮಿ ಅವರು ಹೊಸ ಪೋರ್ಶೆ ಕಾರಿನಲ್ಲಿ ಸುತ್ತಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ