ರಿಷಬ್ ಶೆಟ್ಟಿ ಸಿನಿಮಾಕ್ಕೆ ನಾಯಕಿಯಾದ ಟ್ಯಾಲೆಂಟೆಡ್ ವಾಮಿಕಾ ಗಬ್ಬಿ

16 AUG 2026

By  Manjunatha

ವಾಮಿಕಾ ಗಬ್ಬಿ, ವೇಗವಾಗಿ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆಯುತ್ತಿರುವ ಪ್ರತಿಭಾವಂತ ಯುವ ನಟಿ.

 ಪ್ರತಿಭಾವಂತ ಯುವ ನಟಿ

ಇತ್ತೀಚೆಗೆ ಬಿಡುಗಡೆ ಆಗಿರುವ ತಮಿಳಿನ ‘ಡಿಸಿ’ ಸಿನಿಮಾದ ನಾಯಕಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ನಟಿ ವಾಮಿಕಾ.

 ‘ಡಿಸಿ’ ಸಿನಿಮಾದ ನಾಯಕಿ

‘ಡಿಸಿ’ ಸಿನಿಮಾ ದೊಡ್ಡ ಹಿಟ್ ಆಗಿರುವ ಬೆನ್ನಲ್ಲೆ ಇದೀಗ ವಾಮಿಕಾ ಗಬ್ಬಿ, ರಿಷಬ್ ಶೆಟ್ಟಿ ಜೊತೆ ನಟಿಸಲಿದ್ದಾರೆ.

      ರಿಷಬ್ ಶೆಟ್ಟಿ ಜೊತೆ

ರಿಷಬ್ ಶೆಟ್ಟಿ ನಟಿಸುತ್ತಿರುವ ‘ಜೈ ಹನುಮಾನ್’ ಸಿನಿಮಾಕ್ಕೆ ವಾಮಿಕಾ ಗಬ್ಬಿ ನಾಯಕಿ. 

 ‘ಜೈ ಹನುಮಾನ್’ ಸಿನಿಮಾ

ಇದು ಹನುಮಂತನ ಕುರಿತಾದ ಸಿನಿಮಾ ಆಗಿರುವ ಕಾರಣ ಸಿನಿಮಾನಲ್ಲಿ ವಾಮಿಕಾರದ್ದು ನಾಯಕಿಯ ಪಾತ್ರವೇನಾ ಎಂಬ ಬಗ್ಗೆ ಖಾತ್ರಿ ಇಲ್ಲ.

ನಾಯಕಿಯ ಪಾತ್ರವೇನಾ?

ಪ್ರತಿಭಾವಂತ ಹಾಗೂ ಸುಂದರ ನಟಿ ಆಗಿರುವ ವಾಮಿಕಾಗೆ ಹಲವಾರು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.

    ಸಿನಿಮಾ ಅವಕಾಶಗಳು

‘ಜೈ ಹನುಮಾನ್’ ಸಿನಿಮಾ ಸೇರಿ ಆಮಿಕಾ ಗಬ್ಬಿ ಕೈಯಲ್ಲಿ ಬರೋಬ್ಬರಿ ಒಂಬತ್ತು ಸಿನಿಮಾಗಳು ಈಗ ಇವೆ.

    ಒಂಬತ್ತು ಸಿನಿಮಾಗಳು

ಒಟ್ಟಾರೆ ವಾಮಿಕಾ ಗಬ್ಬಿ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಬಲು ವೇಗವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆಯುತ್ತಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್