ಅನುಷ್ಕಾ ಶರ್ಮಾ ‘ಚಾಕಡ್ ಎಕ್ಸ್​ಪ್ರೆಸ್’ ಸಿನಿಮಾ ಕತೆ ಏನಾಯ್ತು?

27 July 2025

By  Manjunatha

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗಂತೂ ಚಿತ್ರರಂಗದಿಂದ ದೂರ ಆಗಿಬಿಟ್ಟಿದ್ದಾರೆ.

    ನಟಿ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಜೊತೆ ಮದುವೆ ಆದ ಬಳಿಕವೂ ಅನುಷ್ಕಾ ಶರ್ಮಾ ಸಿನಿಮಾಗಳಲ್ಲಿ ನಟಿಸುತ್ತಿದ್ದರು.

ಅನುಷ್ಕಾ ಶರ್ಮಾ ಸಿನಿಮಾ

ನಟನೆಯ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಸಹ ಅನುಷ್ಕಾ ಶರ್ಮಾ ಮಾಡುತ್ತಿದ್ದರು.

   ಸಿನಿಮಾ ನಿರ್ಮಾಣ ಸಹ

2022 ರಲ್ಲಿ ಅನುಷ್ಕಾ ಶರ್ಮಾ, ಮಹಿಳಾ ಕ್ರಿಕೆಟಿಗರೊಬ್ಬರ ಜೀವನ ಆಧರಿಸಿದ ಸಿನಿಮಾ ಘೋಷಣೆ ಮಾಡಿದರು.

ಸಿನಿಮಾ ಘೋಷಣೆ ಆಗಿತ್ತು

ಆ ಸಿನಿಮಾದ ಟೀಸರ್, ಪೋಸ್ಟರ್​ಗಳು ಸಹ ಬಿಡುಗಡೆ ಆಗಿದ್ದವು, ನೆಟ್​ಫ್ಲಿಕ್ಸ್​ ಆ ಸಿನಿಮಾ ಘೋಷಣೆ ಮಾಡಿತ್ತು.

ನೆಟ್​ಫ್ಲಿಕ್ಸ್ ನಿರ್ಮಾಣದಲ್ಲಿ

ಆದರೆ ಆ ಸಿನಿಮಾ ಈ ವರೆಗೆ ಬಿಡುಗಡೆ ಆಗಲಿಲ್ಲ. ಆ ಸಿನಿಮಾದ ಯಾವುದೇ ಅಪ್​ಡೇಟ್​ ಸಹ ಹೊರಬರುತ್ತಿಲ್ಲ.

        ಬಿಡುಗಡೆ ಆಗಲಿಲ್ಲ

ಇದೀಗ ಆ ಸಿನಿಮಾದಲ್ಲಿ ನಟಿಸಿದ್ದ ದಿವ್ಯೇಂದು ಭಟ್ಟಾಚಾರ್ಯ ಸಂದರ್ಶನವೊಂದರಲ್ಲಿ ಆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ದಿವ್ಯೇಂದು ಭಟ್ಟಾಚಾರ್ಯ

ಅನುಷ್ಕಾ ಶರ್ಮಾ ಮತ್ತು ನೆಟ್​ಪ್ಲಿಕ್ಸ್​ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ. ಆದರೆ ಆ ಸಿನಿಮಾ ಪೂರ್ಣಗೊಂಡಿದೆ ಎಂದಿದ್ದಾರೆ.

   ಏನು ನಡೆದಿದೆ ಗೊತ್ತಿಲ್ಲ

ನಾನು ಆ ಸಿನಿಮಾ ಪದೇ ಪದೇ ನೋಡಿದ್ದೇನೆ, ಸಿನಿಮಾ ಬಹಳ ಚೆನ್ನಾಗಿದೆ. ಆದರೆ ಎಂದು ಬಿಡುಗಡೆ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ.

ಸಿನಿಮಾ ಬಹಳ ಚೆನ್ನಾಗಿದೆ