ಸಮಂತಾ ಕೈತಪ್ಪಿತೇ ಹಾಲಿವುಡ್ ಸಿನಿಮಾ? ಕಾರಣ ಏನು?

15 May 2025

By  Manjunatha

ನಟಿ ಸಮಂತಾ ಈಗ ಪ್ಯಾನ್ ಇಂಡಿಯಾ ನಟಿ. ಹಲವು ಭಾಷೆಗಳ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ.

   ಪ್ಯಾನ್ ಇಂಡಿಯಾ ನಟಿ

ಕೆಲ ವರ್ಷಗಳ ಹಿಂದೆಯಷ್ಟೆ ಸಮಂತಾ ಸಾಲು-ಸಾಲು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಆದರೆ ಎಲ್ಲವೂ ಅವರಿಗೆ ಸಿಗಲಿಲ್ಲ.

    ಸಾಲು-ಸಾಲು ಸಿನಿಮಾ

ಸಮಂತಾ ಹಾಲಿವುಡ್ ಸಿನಿಮಾ ಒಂದಕ್ಕೆ ಆಯ್ಕೆ ಆಗಿದ್ದರು. ಸಿನಿಮಾದ ನಿರ್ದೇಶಕನೊಟ್ಟಿಗೆ ಚಿತ್ರ ಸಹ ಹಂಚಿಕೊಂಡಿದ್ದರು.

ಸಮಂತಾ ಹಾಲಿವುಡ್ ಚಿತ್ರ

‘ಅರೇಂಜ್​ ಮೆಂಟ್ಸ್ ಆಫ್ ಲವ್’ ಹೆಸರಿನ ಕಾದಂಬರಿ ಆಧರಿತ ಇಂಗ್ಲೀಷ್ ಸಿನಿಮಾನಲ್ಲಿ ನಟಿ ಸಮಂತಾ ಋತ್ ಪ್ರಭು ನಟಿಸಲಿದ್ದರು.

  ಕಾದಂಬರಿ ಆಧರಿತ ಚಿತ್ರ

ಸಿನಿಮಾದ ಪಾತ್ರಕ್ಕೆ ಆಡಿಷನ್ ನೀಡಿ ಸಮಂತಾ ಆಯ್ಕೆ ಆಗಿದ್ದರು. ಬಾಫ್ಟಾ ವಿಜೇತ ಫಿಲಿಪ್ ಜಾನ್ ಆ ಸಿನಿಮಾ ನಿರ್ದೇಶಿಸುವವರಿದ್ದರು.

 ನಿರ್ದೇಶಕ ಫಿಲಿಪ್ ಜಾನ್

ಸಿನಿಮಾಕ್ಕೆ ಆಯ್ಕೆ ಆದ ಬಳಿಕ ಸಮಂತಾಗೆ ಅನಾರೋಗ್ಯ ಕಾಡಿತು. ಅವರು ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕಾಯ್ತು.

 ಸಮಂತಾಗೆ ಅನಾರೋಗ್ಯ

ಇದೇ ಕಾರಣಕ್ಕೆ ‘ಅರೇಂಜ್​ಮೆಂಟ್ಸ್ ಆಫ್ ಲವ್’ ಸಿನಿಮಾ ನೆನಗುದಿಗೆ ಬಿತ್ತು. ಆ ಸಿನಿಮಾ ಇನ್ನೂ ಪ್ರಾರಂಭ ಆಗಿಲ್ಲ.

 ಸಿನಿಮಾ ನೆನಗುದಿಗೆ ಬಿತ್ತು

ಸಮಂತಾ ಪ್ರಸ್ತುತ ಒಂದು ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಒಂದು ತೆಲುಗು ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

       ಹಿಂದಿ ವೆಬ್ ಸರಣಿ