ಎಲ್ಲಿ ಹೋದರು ‘ಪ್ರೇಮುಲು’ ಚೆಲುವೆ, ಕೈಯಲ್ಲಿರುವ ಸಿನಿಮಾಗಳು ಯಾವುವು?

20 June 2025

By  Manjunatha

ಮಲಯಾಳಂ ಸಿನಿಮಾ ‘ಪ್ರೇಮುಲು’ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಸಿನಿಮಾ.

ಸೂಪರ್ ಹಿಟ್ ಪ್ರೇಮುಲು

ಮೂರು ಕೋಟಿ ಬಜೆಟ್​ನ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದು ಬರೋಬ್ಬರಿ 140 ಕೋಟಿ.

   ಮೂರು ಕೋಟಿ ಬಜೆಟ್​

ಸಿನಿಮಾದಲ್ಲಿ ಬಹುವಾಗಿ ಗಮನ ಸೆಳೆದಿದ್ದು ಸಿನಿಮಾ ನಾಯಕಿ ಮಮಿತಾ ಬೈಜು, ಅವರ ಸರಳ ಸೌಂದರ್ಯ ಮತ್ತು ನಟನೆಗೆ ಭೇಷ್ ಎನ್ನದವರಿಲ್ಲ.

 ನಾಯಕಿ ಮಮಿತಾ ಬೈಜು

‘ಪ್ರೇಮುಲು’ ಆದ ಬಳಿಕ ಮಮಿತಾ ಬಗ್ಗೆ ಹೆಚ್ಚಿನ ಸುದ್ದಿ ಇಲ್ಲ. ಹಾಗೆಂದು ಅವರು ಸಿನಿಮಾದಿಂದ ದೂರಾಗಿಲ್ಲ, ಬದಲಿಗೆ ಹೆಚ್ಚು ಸಕ್ರಿಯರಾಗಿದ್ದಾರೆ.

    ಹಲವು ಸಿನಿಮಾಗಳಿವೆ

‘ಪ್ರೇಮುಲು’ ಬಳಿಕ ಮಮಿತಾಗೆ ಭಾರಿ ದೊಡ್ಡ ಬಜೆಟ್​ನ ಸಿನಿಮಾ ಆಫರ್​ಗಳು ಕೈ ಸೇರಿವೆ, ದೊಡ್ಡ ನಟರೊಟ್ಟಿಗೆ ನಟಿಸುತ್ತಿದ್ದಾರೆ.

ದೊಡ್ಡ ನಟರೊಟ್ಟಿಗೆ ನಟನೆ

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಸಿನಿಮಾನಲ್ಲಿ ಮಮಿತಾ ಬೈಜು ನಟಿಸುತ್ತಿದ್ದಾರೆ.

 ದಳಪತಿ ವಿಜಯ್ ಜೊತೆಗೆ

ತಮಿಳಿನ ಸೂರ್ಯ ನಟನೆಯ ಹೊಸ ಸಿನಿಮಾಕ್ಕೆ ಮಮಿತಾ ಬೈಜು ನಾಯಕಿ, ಸಿನಿಮಾದ ಹೆಸರು ‘ಕರುಪ್ಪನ್’

 ಸೂರ್ಯ ನಟನೆಯ ಚಿತ್ರ

ಪ್ರದೀಪ್ ರಂಗನಾಥನ್ ನಟನೆಯ ‘ಡ್ಯೂಡ್’ ಸಿನಿಮಾಕ್ಕೂ ಮಮಿತಾ ಬೈಜು ಅವರೇ ನಾಯಕಿ.

ಪ್ರದೀಪ್ ರಂಗನಾಥನ್ ಚಿತ್ರ

‘ಇರಂದು ವಾನಂ’ ಹೆಸರಿನ ಮತ್ತೊಂದು ತಮಿಳು ಸಿನಿಮಾದ ಶೂಟಿಂಗ್ ಅನ್ನು ಸಹ ಮಮಿತಾ ಮುಗಿಸಿದ್ದಾರೆ.

    ‘ಇರಂದು ವಾನಂ’ ಚಿತ್ರ