ಜಾಹೀರಾತು ನಟನೆಗೆ ಮಹೇಶ್ ಬಾಬು ಪುತ್ರಿ ಪಡೆಯುವ ಸಂಭಾವನೆ ಎಷ್ಟು ಕೋಟಿ?

09 Apr 2025

By  Manjunatha

ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿಗೆ ಈಗಿನಲ್ಲೂ 12 ವರ್ಷ ವಯಸ್ಸು, ಈಗಲೇ ಅವರು ಸ್ಟಾರ್.

     ಮಹೇಶ್ ಬಾಬು ಪುತ್ರಿ

ಸಿತಾರಾ ಗಟ್ಟಿಮನೇನಿ ಇನ್ನೂ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಈಗಲೇ ಅವರಿಗೆ ಅಭಿಮಾನಿಗಳಿದ್ದಾರೆ.

     ಸಿತಾರಾ ಗಟ್ಟಿಮನೇನಿ

ಸಿತಾರಾ ಗಟ್ಟಿಮನೇನಿ ಜಾಹೀರಾತಿನ ಮೂಲಕವೇ ಜನಪ್ರಿಯರಾಗಿದ್ದಾರೆ. ಜನಪ್ರಿಯತೆಗೆ ಅವರ ತಂದೆಯೂ ಕಾರಣ.

 ಜನಪ್ರಿಯ ನಟಿ ಆಗಿದ್ದಾರೆ

ಸಿತಾರಾ ಈಗಾಗಲೇ ಕೆಲವು ಫ್ಯಾಷನ್ ಸಂಬಂಧಿತ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ.

    ಫ್ಯಾಷನ್  ಜಾಹೀರಾತು

ಅಂದಹಾಗೆ ಸಿತಾರಾ ಗಟ್ಟಿಮನೇನಿ ಪ್ರತಿ ಜಾಹೀರಾತಿನಲ್ಲಿ ನಟಿಸಲು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.

ಸಿತಾರಾ ಸಂಭಾವನೆ ಎಷ್ಟು

ಇತ್ತೀಚೆಗಷ್ಟೆ ಸಿತಾರಾ ಗಟ್ಟಿಮನೇನಿ ತಮ್ಮ ತಂದೆ ಮಹೇಶ್ ಬಾಬು ಅವರೊಟ್ಟಿಗೆ ಫ್ಯಾಷನ್ ಸಂಬಂಧಿತ ಜಾಹೀರಾತಿನಲ್ಲಿ ನಟಿಸಿದರು.

      ಅಪ್ಪನೊಟ್ಟಿಗೆ ನಟನೆ

ಈ ಜಾಹೀರಾತಿನಲ್ಲಿ ನಟಿಸಲು ಸಿತಾರಾ ಗಟ್ಟಿಮನೇನಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.

 ಕೊಟ್ಟ ಸಂಭಾವನೆ ಎಷ್ಟು

ಸಿತಾರಾ ಗಟ್ಟಿಮನೇನಿ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದು ಈಗಾಗಲೇ ಕೆಲವು ಸಿನಿಮಾ ಆಫರ್​ಗಳು ಸಹ ಬರುತ್ತಿವೆ.

ಸಿತಾರಾ ಒಳ್ಳೆಯ ಡ್ಯಾನ್ಸರ್

ಆದರೆ ಅವರ ತಾಯಿಗೆ ಮಗಳು ಈಗಲೇ ಸಿನಿಮಾಗಳಲ್ಲಿ ನಟಿಸುವುದು ಇಷ್ಟವಿಲ್ಲ. ಆಕೆಗಿನ್ನೂ 12 ವರ್ಷ ಈಗಲೇ ಸಿನಿಮಾ ಬೇಡ ಎಂದಿದ್ದಾರೆ.

ಸಿತಾರಾ ತಾಯಿಗೆ ಇಷ್ಟವಿಲ್ಲ