ಮತ್ತೆ ಶೂಟಿಂಗ್​ಗೆ ಮರಳುವುದು ಯಾವಾಗ ದೀಪಿಕಾ ಪಡುಕೋಣೆ? ಇಲ್ಲಿದೆ ಉತ್ತರ

05 Apr 2025

By  Manjunatha

ದೀಪಿಕಾ ಪಡುಕೋಣೆ ಸಿನಿಮಾ ಶೂಟಿಂಗ್​ನಿಂದ ದೂರಾಗಿ ವರ್ಷಕ್ಕಿಂತಲೂ ಹೆಚ್ಚು ಸಮಯವೇ ಆಗಿದೆ.

ನಟಿ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ತಾಯಿ ಆಗಿದ್ದು, ತಾಯಿ ಆಗುವ ಕೆಲ ತಿಂಗಳ ಮುಂಚಿನಿಂದಲೂ ದೀಪಿಕಾ, ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ.

 ತಾಯಿ ಆಗಿರುವ ದೀಪಿಕಾ

ದೀಪಿಕಾ ಈಗ ಮುದ್ದಾದ ಹೆಣ್ಣು ಮಗುವಿನ ತಾಯಿ. ದೀಪಿಕಾ ಪಡುಕೋಣೆಯ ಮಗುವಿಗೆ ಈ ಸೆಪ್ಟೆಂಬರ್ ತಿಂಗಳಿಗೆ ಒಂದು ವರ್ಷ ತುಂಬುತ್ತದೆ.

     ಸೆಪ್ಟೆಂಬರ್​ಗೆ ವರ್ಷ

ದೀಪಿಕಾ ಇತ್ತೀಚೆಗೆ ಕೆಲ ಫ್ಯಾಷನ್ ಶೋಗಳಲ್ಲಿ, ಫೋಟೊ ಶೂಟ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಶೀಘ್ರವೇ ಅವರು ಶೂಟಿಂಗ್​ಗೆ ಮರಳಲಿದ್ದಾರೆ.

ಫ್ಯಾಷನ್ ಶೋಗಳಲ್ಲಿ ಭಾಗಿ

ದೀಪಿಕಾ ಪಡುಕೋಣೆ ಹಲವು ಕತೆಗಳನ್ನು ಕೇಳುತ್ತಿದ್ದಾರಂತೆ. ಒಟ್ಟಿಗೆ ಎರಡು-ಮೂರು ಸಿನಿಮಾಗಳಲ್ಲಿ ಅವರು ನಟಿಸಲಿದ್ದಾರೆ.

 ಕತೆಗಳ ಕೇಳುತ್ತಿದ್ದಾರೆ ನಟಿ

ಇನ್ನೊಂದು ಸುದ್ದಿಯ ಪ್ರಕಾರ, ದೀಪಿಕಾ ಪಡುಕೋಣೆ, ‘ಕಲ್ಕಿ 2’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ.

    ‘ಕಲ್ಕಿ 2’ ಸಿನಿಮಾದಲ್ಲಿ

‘ಕಲ್ಕಿ 2’ ಸಿನಿಮಾ ಚಿತ್ರೀಕರಣ ಶುರುವಾಗಲು ಇನ್ನೂ ಒಂದು ವರ್ಷ ಸಮಯ ಬೇಕಿದ್ದು, ಆ ಸಮಯಕ್ಕೆ ಅವರು ಚಿತ್ರೀಕರಣಕ್ಕೆ ಮರಳಲಿದ್ದಾರಂತೆ.

   ಒಂದು ವರ್ಷ ಸಮಯ

ದೀಪಿಕಾ ಪಡುಕೋಣೆ ಇದೀಗ ಫೋರ್ಬ್ಸ್, ಲ್ಯಾಕ್ಮೆ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳ ಫ್ಯಾಷನ್ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 ಫ್ಯಾಷನ್ ಶೋನಲ್ಲಿ ಭಾಗಿ

ಈ ಬಿಡುವಿನ ಸಮಯವನ್ನು ಅವರು ತಮ್ಮ ಉದ್ಯಮವನ್ನು ಇನ್ನಷ್ಟು ಹೆಚ್ಚಿಸಲು ಸಹ ವಿನಿಯೋಗಿಸಿದ್ದಾರೆ ಎನ್ನಲಾಗುತ್ತಿದೆ.

    ಉದ್ಯಮದಲ್ಲಿ ದೀಪಿಕಾ