ವಿಶಾಲ್ ಜೊತೆ ಮದುವೆ ಆಗಲಿರುವ ಧನ್ಸಿಕಾ ಹಿನ್ನೆಲೆ ಏನು?

26 May 2025

By  Manjunatha

ತಮಿಳಿನ ಸ್ಟಾರ್ ನಟ ವಿಶಾಲ್ ಇತ್ತೀಚೆಗಷ್ಟೆ ವಿವಾಹವಾಗುವುದಾಗಿ ಘೋಷಿಸಿದ್ದಾರೆ. ನಟಿ ಧನ್ಸಿಕಾ ಜೊತೆ.

    ನಟ ವಿಶಾಲ್ ಮದುವೆ

ವಿಶಾಲ್ ಮದುವೆ ಆಗಲಿರುವ ಸಾಯಿ ಧನ್ಸಿಕಾ ಸಹ ನಟಿಯೇ ಆಗಿದ್ದು, ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

     ನಟಿ ಸಾಯಿ ಧನ್ಸಿಕಾ

ಅಂದಹಾಗೆ ಸಾಯಿ ಧನ್ಸಿಕಾ ಮೊದಲ ಹೆಸರು ಮರಿನಾ, ಧನ್ಸಿಕಾ ಮೂಲತಃ ತಮಿಳುನಾಡಿನ ತಂಜಾವೂರಿನವರು.

 ಮೊದಲ ಹೆಸರು ಮರಿನಾ

2006 ರಲ್ಲಿ ಅವರು ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ‘ತಿರುಡಿ’ ಸಿನಿಮಾನಲ್ಲಿ ನಾಯಕಿಯೂ ಆದರು.

ತಮಿಳು ಸಿನಿಮಾ ಮೂಲಕ

2009 ರಲ್ಲಿ ಕನ್ನಡದ ‘ಕೆಂಪ’ ಹೆಸರಿನ ಸಿನಿಮಾನಲ್ಲಿ ಧನ್ಸಿಕಾ ನಟಿಸಿದ್ದಾರೆ. ಆಗ ಅವರ ಹೆಸರು ತನುಶಿಕಾ ಎಂದಿತ್ತು.

ಕನ್ನಡ ಸಿನಿಮಾನಲ್ಲಿ ನಟನೆ

2019 ರಲ್ಲಿ ಬಿಡುಗಡೆ ಆದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಕನ್ನಡ ಸಿನಿಮಾದಲ್ಲಿಯೂ ಧನ್ಸಿಕಾ ನಟಿಸಿದ್ದಾರೆ.

  ಮತ್ತೊಂದು ಕನ್ನಡ ಚಿತ್ರ

ಕನ್ನಡ, ತಮಿಳು ಮಾತ್ರವೇ ಅಲ್ಲದೆ ಮಲಯಾಳಂ ಹಾಗೂ ತೆಲುಗಿನ ಸಿನಿಮಾಗಳಲ್ಲಿಯೂ ಧನ್ಸಿಕಾ ನಟಿಸಿದ್ದಾರೆ.

ಹಲವು ಭಾಷೆಗಳಲ್ಲಿ ನಟನೆ

ಧನ್ಸಿಕಾ ವಯಸ್ಸು ಈಗ 35 ವರ್ಷ, ಅದೇ ವಿಶಾಲ್ ವಯಸ್ಸು 48 ವರ್ಷ, ಇಬ್ಬರೂ ಇದೇ ಆಗಸ್ಟ್​​ನಲ್ಲಿ ವಿವಾಹ ಆಗಲಿದ್ದಾರೆ.

ಧನ್ಸಿಕಾ-ವಿಶಾಲ್ ವಯಸ್ಸು