ಶ್ರೀಲೀಲಾ ಮೊದಲ ಬಾಲಿವುಡ್ ಸಿನಿಮಾ ರಿಲೀಸ್ ತಡವಾಗುತ್ತಿರುವುದೇಕೆ?

23 APRL 2026

By  Manjunatha

ಶ್ರೀಲೀಲಾ ಕನ್ನಡದ ನಟಿ, ಆದರೆ ಈಗ ಪರ ಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ.

  ಶ್ರೀಲೀಲಾ ಕನ್ನಡದ ನಟಿ

ತೆಲುಗಿನ ಸ್ಟಾರ್ ನಟಿಯಾದ ಬಳಿಕ ತಮಿಳಿಗೆ ಹೋಗಿ ಅಲ್ಲಿಯೂ ಬೇಡಿಕೆ ಕುದುರಿಸಿಕೊಂಡಿದ್ದಾರೆ.

      ತೆಲುಗಿನ ಸ್ಟಾರ್ ನಟಿ

ಶ್ರೀಲೀಲಾ ಬಾಲಿವುಡ್​​ಗೆ ಸಹ ಪದಾರ್ಪಣೆ ಮಾಡುತ್ತಿದ್ದು, ಅವರ ಮೊದಲ ಹಿಂದಿ ಸಿನಿಮಾ ಕಳೆದ ವರ್ಷವೇ ರಿಲೀಸ್ ಆಗಬೇಕಿತ್ತು.

  ಬಾಲಿವುಡ್​​ಗೆ ಪದಾರ್ಪಣೆ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದು, ಅದರ ಬಿಡುಗಡೆ ತಡವಾಗುತ್ತಲೇ ಸಾಗುತ್ತಿದೆ.

 ಕಾರ್ತಿಕ್ ಆರ್ಯನ್ ಜೊತೆ

ಸಿನಿಮಾದ ನಿರ್ದೇಶಕ ಅನುರಾಗ್ ಬಸು ಈ ಬಗ್ಗೆ ಮಾತನಾಡಿ, ಈ ವರೆಗೆ 45 ದಿನಗಳ ಶೂಟಿಂಗ್ ಅಷ್ಟೆ ಆಗಿದೆ ಎಂದಿದ್ದಾರೆ.

ನಿರ್ದೇಶಕ ಅನುರಾಗ್ ಬಸು

ಶ್ರೀಲೀಲಾಗೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಇದೊಂದು ರೊಮ್ಯಾಂಟಿಕ್ ಸಿನಿಮಾ.

  ಮೊದಲ ಹಿಂದಿ ಸಿನಿಮಾ

ಅನುರಾಗ್ ಬಸು ಅಂಥಹಾ ಹಿಟ್ ನಿರ್ದೇಶಕನೊಟ್ಟಿಗೆ ಶ್ರೀಲೀಲಾ ಕೆಲಸ ಮಾಡುತ್ತಿದ್ದು, ದೊಡ್ಡ ನಿರ್ಮಾಣ ಸಂಸ್ಥೆ ಜೊತೆಗಿದೆ.

 ಹಿಟ್ ನಿರ್ದೇಶಕನೊಟ್ಟಿಗೆ

ಆದರೆ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣ ತಡವಾಗುತ್ತಲೇ ಸಾಗುತ್ತಿದೆಯಂತೆ.

ಭಿನ್ನಾಭಿಪ್ರಾಯಗಳ ಕಾರಣ