ಹಾಲಿವುಡ್​ ಬಿಟ್ಟು ಭಾರತೀಯ ಚಿತ್ರರಂಗದಲ್ಲೇ ಸೆಟಲ್ ಆಗಲಿದ್ದಾರಾ ಪ್ರಿಯಾಂಕಾ ಚೋಪ್ರಾ?

11 Apr 2025

By  Manjunatha

ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದರು. ಆದರೆ ಆ ಬಳಿಕ ಹಾಲಿವುಡ್​ಗೆ ತೆರಳಿದ್ದರು.

ನಟಿ ಪ್ರಿಯಾಂಕಾ ಚೋಪ್ರಾ

2016 ರಲ್ಲೇ ಬಾಲಿವುಡ್ ಬಿಟ್ಟು ಹಾಲಿವುಡ್​ಗೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ, ಅಲ್ಲಿ ಬ್ಯುಸಿ ನಟಿ ಎನಿಸಿಕೊಂಡಿದ್ದಾರೆ.

ಹಾಲಿವುಡ್​ಗೆ ಕಾಲಿಟ್ಟ ನಟಿ

ಆದರೆ ಇದೀಗ ಪ್ರಿಯಾಂಕಾ ಚೋಪ್ರಾ ಮತ್ತೆ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

 ಭಾರತೀಯ ಸಿನಿಮಾಗಳು

ಪ್ರಿಯಾಂಕಾ ಚೋಪ್ರಾ ಈಗಾಗಲೇ ರಾಜಮೌಳಿ ನಿರ್ದೇಶಿಸುತ್ತಿರುವ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 ಮಹೇಶ್ ಬಾಬು ಸಿನಿಮಾ

ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಶೂಟಿಂಗ್ ಇನ್ನೂ ಒಂದು ವರ್ಷ ಸತತವಾಗಿ ನಡೆಯಲಿದೆ.

ಶೂಟಿಂಗ್ ಜೋರಾಗಿ ಸಾಗಿದೆ

ಇದರ ನಡುವೆ ಅಲ್ಲು ಅರ್ಜುನ್ ನಟಿಸಿ, ಅಟ್ಲಿ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿಯೂ ಪ್ರಿಯಾಂಕಾ ನಾಯಕಿಯಾಗಿ ನಟಿಸಲಿದ್ದಾರೆ.

 ಅಲ್ಲು ಅರ್ಜುನ್ ಸಿನಿಮಾ

ಅದಾದ ಬಳಿಕ ಹೃತಿಕ್ ರೋಷನ್ ಜೊತೆಗೆ ‘ಕ್ರಿಶ್ 4’ ಸಿನಿದಲ್ಲಿಯೂ ಪ್ರಿಯಾಂಕಾ ನಟಿಸಲಿದ್ದಾರೆ.

 ‘ಕ್ರಿಶ್ 4’ ಸಿನಿಮಾ ನಾಯಕಿ

2016ರ ಬಳಿಕ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಮತ್ತೆ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

     ಭಾರತೀಯ ಚಿತ್ರರಂಗ