Pic Credit: pinterest
By Preeti Bhat
09 July 2025
ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಳೆಗಾಲದಲ್ಲಿ, ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು.
ಪೌಷ್ಟಿಕತಜ್ಞೆ ಕಿರಣ್ ಕುಕ್ರೇಜಾ ಅವರು ಮಳೆಗಾಲದಲ್ಲಿ ಕೆಲವು ತರಕಾರಿಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಆ ತರಕಾರಿಗಳು ಯಾವುದು?
ಮಳೆಗಾಲದಲ್ಲಿ, ತರಕಾರಿಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಅವು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಹಾಗಾಗಿ ಬೇಗನೆ ಹರಡಬಹುದು.
ಅಷ್ಟೇ ಅಲ್ಲ, ತರಕಾರಿಗಳ ಮೇಲೆ ಅತಿಯಾದ ತೇವಾಂಶವೂ ಇರುತ್ತದೆ. ಇದು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ.
ಪಾಲಕ್ ಮತ್ತು ಮೆಂತೆ ಸೊಪ್ಪಿನಲ್ಲಿ, ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳು ಇರುವ ಸಾಧ್ಯತೆಯಿದೆ. ಹಾಗಾಗಿ ಮಳೆಗಾಲದಲ್ಲಿ ಅವುಗಳನ್ನು ಖರೀದಿಸುವುದನ್ನು ತಪ್ಪಿಸಿ.
ಮಳೆಗಾಲದಲ್ಲಿ, ಹೂಕೋಸು ಮತ್ತು ಎಲೆಕೋಸು ಕೂಡ ಬಳಸಬಾರದು. ಅವುಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಪದರಗಳ ನಡುವೆ ಶಿಲೀಂಧ್ರ ಇರುವ ಅಪಾಯವಿದೆ.
ಮಳೆಗಾಲದಲ್ಲಿ, ಅಣಬೆಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಸೂಕ್ಷ್ಮಜೀವಿಗಳು, ಕೀಟಗಳು ಮತ್ತು ಶಿಲೀಂಧ್ರಗಳು ಹೆಚ್ಚಾಗಿರುತ್ತದೆ.
ಮಣ್ಣಿನಲ್ಲಿ ಬೆಳೆಯುವ ಆಲೂಗಡ್ಡೆಗಳಲ್ಲಿ ಶಿಲೀಂಧ್ರ ಬೆಳೆಯುವ ಅಪಾಯವಿದೆ. ಅದರಲ್ಲಿಯೂ ಮೊಳಕೆಯೊಡೆದ ಆಲೂಗಡ್ಡೆಯನ್ನು ಸೇವಿಸಬಾರದು.