ನೀವು ರೊಟ್ಟಿ, ಚಪಾತಿಗಳಿಗೆ ಬೆಣ್ಣೆ ಹಚ್ಚಿ ತಿನ್ನುತ್ತಿದ್ದೀರಾ? ಈ ಸಮಸ್ಯೆ ಬರುತ್ತೆ ಹುಷಾರು

Pic Credit: pinterest

By Preeti Bhat

10 July 2025

ಆರೋಗ್ಯಕರ ಅಭ್ಯಾಸ

ನಿಯಮಿತವಾಗಿ ತುಪ್ಪ ಬಳಸುವ ಅಭ್ಯಾಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿಯಾಗಿದೆ.

ಚಪಾತಿ ಜೊತೆ ತುಪ್ಪ 

ತುಪ್ಪವನ್ನು ಇಷ್ಟಪಡುವವರು ಚಪಾತಿ ಬಿಸಿಯಾಗಿರುವಾಗಲೇ ಅದಕ್ಕೆ ತುಪ್ಪ ಸವರಿಕೊಂಡು ತಿನ್ನುತ್ತಾರೆ. ಇದು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.

ರೊಟ್ಟಿ ಮೇಲೆ ಬೆಣ್ಣೆ, ತುಪ್ಪ

ಆದರೆ ಪತಂಜಲಿ ಯೋಗಪೀಠದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರ ಪ್ರಕಾರ, ಬೆಣ್ಣೆ ಅಥವಾ ತುಪ್ಪವನ್ನು ರೊಟ್ಟಿಗಳ ಮೇಲೆ ಹಾಕಿ ತಿನ್ನುವುದು ಒಳ್ಳೆಯದಲ್ಲ.

ಜೀರ್ಣಿಕ್ರಿಯೆಗೆ ಕಷ್ಟ

ಬಾಲಕೃಷ್ಣ ಅವರ ಪ್ರಕಾರ, ರೊಟ್ಟಿಯ ಮೇಲೆ ಬೆಣ್ಣೆಯನ್ನು ಹಚ್ಚುವುದರಿಂದ ಒಂದು ಪದರ ಉಂಟಾಗುತ್ತದೆ. ಇದು ಜೀರ್ಣಿಕ್ರಿಯೆಗೆ ಕಷ್ಟವಾಗುತ್ತದೆ.

ಅಜೀರ್ಣ, ಹೊಟ್ಟೆ ಭಾರ

ಈ ಪದರವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಬಿಡುವುದಿಲ್ಲ. ಪರಿಣಾಮವಾಗಿ, ಅನಿಲ, ಅಜೀರ್ಣ ಮತ್ತು ಹೊಟ್ಟೆ ಭಾರವಾದ ಭಾವನೆ ಉಂಟು ಮಾಡುತ್ತದೆ.

ದಾಲ್ ಜೊತೆ ತುಪ್ಪ 

ನೀವು ಬೆಣ್ಣೆ ಜೊತೆ ರೊಟ್ಟಿ ತಿನ್ನಲು ಬಯಸಿದರೆ, ಚಪಾತಿಗಳಿಗೆ ಬೆಣ್ಣೆ ಹಾಕದೆ ದಾಲ್ ಮಾಡಿ ಅವುಗಳಿಗೆ ಬೆಣ್ಣೆ ಹಾಕಿ ತಿನ್ನಿರಿ.

ಜೀರ್ಣಕ್ರಿಯೆಯ ಸಮಸ್ಯೆ

ಇದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಜೀರ್ಣಕ್ರಿಯೆಯ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಇದಲ್ಲದೆ, ರುಚಿ ಹಾಗೆಯೇ ಇರುತ್ತದೆ.

ಹಿಟ್ಟಿನ ಜೊತೆ ತುಪ್ಪ

ಇನ್ನು ರೊಟ್ಟಿಗಳು ಮೃದುವಾಗಲು ಹಿಟ್ಟಿನ ಜೊತೆಗೆ ತುಪ್ಪ ಬೆರೆಸಬಹುದು. ಆದರೆ ರೊಟ್ಟಿ, ಚಪಾತಿಗಳ ಮೇಲೆ ತುಪ್ಪ ಹಚ್ಚುವುದು ಒಳ್ಳೆಯದಲ್ಲ.