Pic Credit: pinterest
By Sai Nanda
18 September 2025
ನಿಷೇಧಿತ ಅಕ್ಕಿ ಎಂದೂ ಕರೆಯಲಾಗುವ ಕಪ್ಪು ಅಕ್ಕಿ ನೋಡಲು ಕಪ್ಪಾಗಿದ್ರೂ ಆರೋಗ್ಯ ಪ್ರಯೋಜನಗಳು ಹಲವಾರು ಇವೆ.
ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕ ಗುಣ, ಫೈಬರ್, ವಿಟಮಿನ್ಗಳು, ಖನಿಜಗಳು ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಕಪ್ಪು ಅಕ್ಕಿ ಫೈಬರ್ ನಿಂದ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಒಳ್ಳೆಯದು.
ಕಪ್ಪು ಅಕ್ಕಿಯಲ್ಲಿ ಪ್ರೊಟೀನ್ ಹೆಚ್ಚಿದ್ದು, ಇದು ಸಸ್ಯಾಹಾರಿಗಳಿಗೆ ಅತ್ಯುತ್ತಮ ಪ್ರೊಟೀನ್ ಮೂಲವಾಗಿದೆ. ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯಕವಾಗಿದೆ.
ಮಧುಮೇಹಿಗಳು ನಿಯಮಿತವಾಗಿ ಈ ಕಪ್ಪು ಅಕ್ಕಿಯ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.
ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆ ಹಾಗೂ ಹರಡುವಿಕೆಯನ್ನು ತಡೆಯುತ್ತದೆ.
ಕಪ್ಪು ಅಕ್ಕಿಯನ್ನು ಆಹಾರದ ಭಾಗವಾಗಿ ಸೇರಿಸಿಕೊಳ್ಳುವುದರಿಂದ ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೊರ ಪದರವು ಆಳವಾದ ಕಪ್ಪು ಬಣ್ಣವನ್ನು ಹೊಂದಿದ್ದು, ಬೇಯಿಸಿದಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ.