ನಿಮಗೂ ಮಲಬದ್ಧತೆಯ ಸಮಸ್ಯೆ ಇದ್ಯಾ? ಹಾಗಿದ್ರೆ ಅಂಜೂರವನ್ನು  ಸಮಯದಲ್ಲಿ ಸೇವಿಸಿ

Pic Credit: pinterest

By Preeti Bhat

30 July 2025

ಅಂಜೂರ

ಅಂಜೂರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಅವುಗಳಲ್ಲಿರುವ ಆರೋಗ್ಯ ಪ್ರಯೋಜನಗಳು ಸಿಗುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಊಟದ ನಂತರ ನಿಮ್ಮ ಫೈಬರ್ ಸೇವನೆಯ ಭಾಗವಾಗಿ ನೀವು ಒಂದು ಅಥವಾ ಎರಡು ಅಂಜೂರವನ್ನು ತಿನ್ನಬಹುದು. ಇದು ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆ

ಪ್ರತಿದಿನ, ಈ ಅಭ್ಯಾಸವನ್ನು ತಪ್ಪದೆ ರೂಢಿಸಿಕೊಂಡರೆ ಕಿಣ್ವಗಳು ಬಿಡುಗಡೆಯಾಗುತ್ತವೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ.

ರಾತ್ರಿ ನೆನೆಸಿಟ್ಟ ಅಂಜೂರ

ಎರಡು ಅಥವಾ ಮೂರು ಅಂಜೂರವನ್ನು ಅರ್ಧ ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದು ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವನೆ ಮಾಡಿ.

ಮಲಬದ್ಧತೆಯ ಸಮಸ್ಯೆ

ಈ ರೀತಿ ಮಾಡಿದರೆ ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ ನಿಮ್ಮ ತೂಕ ಕೂಡ ಕಡಿಮೆಯಾಗುತ್ತದೆ.

ಜೀರ್ಣಕಾರಿ ಸಮಸ್ಯೆ

ಅಂಜೂರವನ್ನು ನೆನೆಸಿ ಆ ನೀರನ್ನು ಕುಡಿಯುವುದರಿಂದಲೂ ಕೂಡ ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಯಕೃತ್ತಿನ ಕಾರ್ಯ

ಅಂಜೂರ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ನಿವಾರಿಸಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ.

ಆಯಾಸ, ಸುಸ್ತು

ರಾತ್ರಿ ಸಮಯದಲ್ಲಿ ಎರಡು ಅಂಜೂರವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಕೂಡ ಸೇವಿಸಬಹುದು. ಇದರಿಂದ ಆಯಾಸ, ಸುಸ್ತು ಎಲ್ಲವೂ ಕಡಿಮೆಯಾಗುತ್ತದೆ.