Pic Credit: pinterest
By Preeti Bhat
11 August 2025
ಆವಕಾಡೊ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಮಾತ್ರವಲ್ಲ ಮಹಿಳೆಯರ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಆವಕಾಡೊವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮುಟ್ಟನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವನ್ನು ಕೂಡ ನಿವಾರಿಸುತ್ತದೆ.
ಆವಕಾಡೊದಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಅವು ಚರ್ಮವನ್ನು ಮೃದುವಾಗಿ, ಕಾಂತಿಯುತವಾಗಿಡಲು ಸಹಾಯ ಮಾಡುತ್ತವೆ.
ಆವಕಾಡೊದಲ್ಲಿ ಮೋನೋಸಾಚುರೇಟೆಡ್ ಕೊಬ್ಬುಗಳು ಸಮೃದ್ಧವಾಗಿದ್ದು ಮಹಿಳೆಯರ ಹಾರ್ಮೋನುಗಳನ್ನು ಸಮತೋಲನಗೊಳಿಸುವಲ್ಲಿ ಅವು ಉಪಯುಕ್ತವಾಗಿವೆ.
ಆವಕಾಡೊ ಗರ್ಭಧಾರಣೆಗೂ ಒಳ್ಳೆಯದು. ಇದರಲ್ಲಿರುವ ಹೆಚ್ಚಿನ ಫೋಲಿಕ್ ಆಮ್ಲದ ಅಂಶವು ಗರ್ಭಧಾರಣೆಯ ಮೊದಲು ಮತ್ತು ಆ ಸಮಯದಲ್ಲಿ ತುಂಬಾ ಉಪಯುಕ್ತವಾಗಿದೆ.
ಆವಕಾಡೊ ಭ್ರೂಣದ ಬೆಳವಣಿಗೆಗೂ ಕೂಡ ಸಹಾಯ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಕೂಡ ಇದನ್ನು ಸೇವನೆ ಮಾಡಬಹುದು.
ಈ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮಾತ್ರವಲ್ಲ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆವಕಾಡೊ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗೆ ಮುಕ್ತಿ ನೀಡುತ್ತದೆ.