Pic Credit: pinterest
By Preeti Bhat
7 August 2025
ತಾಮ್ರದ ನೀರಿನ ಬಾಟಲಿ ಆರೋಗ್ಯಕ್ಕೆ ಒಳ್ಳೆಯದು ಆದರೆ ಇದನ್ನು ಬಳಸುವುದಕ್ಕಿಂತ ಮುಂಚೆ ಇದನ್ನು ಉಪಯೋಗಿಸುವ ಸರಿಯಾದ ವಿಧಾನವನ್ನು ತಿಳಿದಿರಬೇಕಾಗುತ್ತದೆ.
ತಾಮ್ರದ ಬಾಟಲಿಯಲ್ಲಿ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಜ್ಯೂಸ್, ನಿಂಬೆ ಪಾನಕ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ತುಂಬಿಸಿ ಇಡಬೇಡಿ.
ತಾಮ್ರದ ಬಾಟಲಿಯಲ್ಲಿ ನೀರನ್ನು ದೀರ್ಘಕಾಲ ಸಂಗ್ರಹಿಸಬೇಡಿ. ಏಕೆಂದರೆ ಇದರಿಂದ ಪ್ರಯೋಜನಕ್ಕಿಂತ ಸಮಯೆಗಳೇ ಹೆಚ್ಚಾಗುತ್ತದೆ.
ತಾಮ್ರದ ಬಾಟಲಿಯಲ್ಲಿ ಹಸಿರು ಕಲೆಗಳು ರೂಪುಗೊಂಡು ಆಕ್ಸಿಡೀಕರಣಕ್ಕೆ ಒಳಗಾಗುತ್ತದೆ. ಇದು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ತಾಮ್ರದ ಬಾಟಲಿಯನ್ನು ಉಪ್ಪು ಮತ್ತು ಹುಣಸೆ ಹಣ್ಣಿನಂತಹ ಪದಾರ್ಥಗಳಿಂದ ಸ್ವಚ್ಛಗೊಳಿಸಿ. ತೊಳೆದ ನಂತರ ಅದನ್ನು ಒಣಗಿಸದೆಯೇ ಇಡಬೇಡಿ.
ತಾಮ್ರದ ಬಾಟಲಿಯನ್ನು ಸ್ವಚ್ಛವಾಗಿ ತೊಳೆದ ನಂತರ, ಮುಚ್ಚಳವನ್ನು ತೆರೆದಿಡಿ ಮತ್ತು ಬಾಟಲಿಯನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ.
ತಾಮ್ರದ ನೀರಿನ ಬಾಟಲಿಯಿಂದ ಆರೋಗ್ಯಕ್ಕೆ ಪ್ರಯೋಜನಗಳಿದ್ದರೂ, ಅದರಲ್ಲಿ ಹೆಚ್ಚು ನೀರು ಕುಡಿಯುವುದು ಸರಿಯಲ್ಲ.
ತಾಮ್ರದ ಬಾಟಲಿಯಿಂದ ದಿನಕ್ಕೆ ಒಂದು ಅಥವಾ ಎರಡು ಗ್ಲಾಸ್ ನೀರು ಕುಡಿಯುವುದು ಉತ್ತಮ. ಇಲ್ಲವಾದಲ್ಲಿ ವಾಕರಿಕೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು.