ಹಬ್ಬದ ದಿನ ಬೆಲ್ಲದ ಅನ್ನ ಸೇವನೆ ಮಾಡಿದರೆ ಈ ಕಾಯಿಲೆಗಳು ಹತ್ತಿರವೂ ಬರಲ್ಲ

Pic Credit: pinterest

By Preeti Bhat

14 August 2025

ಸಿಹಿತಿಂಡಿ

ಸಿಹಿತಿಂಡಿ ತಿನ್ನುವುದಕ್ಕೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಆದರೆ ಹೊರಗೆ ಸಿಗುವ ಸಿಹಿ ತಿಂಡಿಗಳನ್ನು ಪದೇ ಪದೇ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಬೆಲ್ಲದ ಅನ್ನ

ಆದರೆ ಬೆಲ್ಲದ ಅನ್ನ ಸಿಹಿ ತಿನ್ನಬೇಕು ಎಂಬ ನಿಮ್ಮ ಆಸೆಯನ್ನು ಪೂರೈಸುವುದರ ಜೊತೆಗೆ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ.

ಆರೋಗ್ಯ ಪ್ರಯೋಜನ

ಪ್ರತಿ ಹಬ್ಬದಲ್ಲಿಯೂ ಬೆಲ್ಲದ ಅನ್ನವನ್ನು ಮಾಡಿ ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಲ್ಲದ ಅನ್ನಕ್ಕೆ ಅಷ್ಟು ಶಕ್ತಿ ಇದೆ.

ಡ್ರೈ ಫ್ರೂಟ್ಸ್

ಸಾಮಾನ್ಯವಾಗಿ ಬೆಲ್ಲ ಮತ್ತು ಅನ್ನದ ಮಿಶ್ರಣ ಅದರ ಜೊತೆಗೆ ನಿಮಗಿಷ್ಟವಾದಲ್ಲಿ ಡ್ರೈ ಫ್ರೂಟ್ಸ್ ಮತ್ತು ಏಲಕ್ಕಿ ಪುಡಿಯನ್ನು, ಸ್ವಲ್ಪ ಉಪ್ಪನ್ನು ಸೇರಿಸಿಕೊಳ್ಳಬಹುದು.

ಸೋಂಕುಗಳಿಂದ ರಕ್ಷಣೆ

ಈ ಅನ್ನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಸೋಂಕುಗಳಿಂದ ರಕ್ಷಿಸುತ್ತದೆ. ಜೊತೆಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿಮೋಗ್ಲೋಬಿನ್ ಹೆಚ್ಚಳ

ಬೆಲ್ಲದ ಅನ್ನದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಗೂ ಕೂಡ ಸಹಾಯ ಮಾಡುತ್ತದೆ.

ಮಲಬದ್ದತೆಗೆ ಮುಕ್ತಿ

ಬೆಲ್ಲದ ಅನ್ನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆಯಾಸವನ್ನು ಕಡಿಮೆ ಆಗುತ್ತದೆ. ತ್ವರಿತ ಶಕ್ತಿಯನ್ನು ನೀಡುತ್ತದೆ. ಮಲಬದ್ದತೆಯನ್ನು ನಿವಾರಿಸುತ್ತದೆ.

ಕೀಲು ನೋವಿಗೆ ಪರಿಹಾರ

ಸಂಧಿವಾತ ಮತ್ತು ಕೀಲು ನೋವಿನಿಂದ ಬಳಲುತ್ತಿರುವವರು, ಬೆಲ್ಲದ ಅನ್ನವನ್ನು ನಿಯಮಿತವಾಗಿ ಸೇವನೆ ಮಾಡಬೇಕು.