Pic Credit: gettyimages
By Preeti Bhatt
20 April 2025
ಮಗುವಿನ ಆರೋಗ್ಯಕ್ಕೆ ಎದೆ ಹಾಲು ಅತ್ಯಗತ್ಯ. ಈ ಹಾಲು ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ ಎಂಬುದು ತಿಳಿದಿರುವ ವಿಚಾರ.
ತಾಯಿಯ ಹಾಲಿನಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಶಕ್ತಿ ಸಿಗುವುದರಿಂದ ಮಗುವಿಗೆ ಆರೋಗ್ಯ ಒದಗಿಸುತ್ತವೆ.
ಖರ್ಜೂರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ತಾಯಿಯ ಎದೆಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ.
ಮೆಂತ್ಯ ಬೀಜಗಳು ತಾಯಿಯ ಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಕಾರಿಯಾಗಿದೆ. ಅದಲ್ಲದೆ ಇವುಗಳಲ್ಲಿ ಫೈಟೊ ಈಸ್ಟ್ರೊಜೆನ್ ಸಮೃದ್ಧವಾಗಿದೆ.
ಓಟ್ಸ್ ಸೇವನೆ ಒತ್ತಡದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದರ ಸೇವನೆಯಿಂದ ಹಾಲಿನ ರುಚಿ ಕೂಡ ಹೆಚ್ಚಾಗುತ್ತದೆ.
ಕರಿಬೇವಿನ ಎಲೆಗಳ ಸೇವನೆ ಮಾಡುವುದರಿಂದ ಹಾಲಿನ ಹರಿವು ಹೆಚ್ಚಾಗುತ್ತದೆ. ಇದು ಜೀರ್ಣಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. .
ಹಾಲು ಹೆಚ್ಚಾಗುವುದಕ್ಕೆ ತಾಯಿ ಸೇವನೆ ಮಾಡುವ ಆಹಾರ ಬಹಳ ಮುಖ್ಯವಾಗುತ್ತದೆ.
ಆಹಾರ ಸೇವನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಸೇವನೆ ಮಾಡಿ. ಇಲ್ಲಿ ತಿಳಿಸಿರುವ ಆಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡಲು ಪ್ರಯತ್ನಿಸಿ.