Pic Credit: pinterest
By Preeti Bhat
08 May 2025
ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರಲು ಸ್ನಾನ ಮಾಡುವುದು ಅತ್ಯಗತ್ಯ.
ಸ್ನಾನವು ದೇಹವನ್ನು ಶುದ್ಧೀಕರಿಸುವುದು ಮಾತ್ರವಲ್ಲ ನಮ್ಮ ಮನಸ್ಸಿಗೂ ನೆಮ್ಮದಿ ಕೊಡುತ್ತದೆ.
ಹೆಚ್ಚಿನವರು ಬೆಳಿಗ್ಗೆ ಸ್ನಾನ ಮಾಡುತ್ತಾರೆ. ಇನ್ನು ಕೆಲವರು ರಾತ್ರಿ ಸಮಯದಲ್ಲಿ ಸ್ನಾನ ಮಾಡುತ್ತಾರೆ.
ರಾತ್ರಿ ಸಮಯದಲ್ಲಿ ಸ್ನಾನ ಮಾಡುವುದರಿಂದ ಹಗಲಿನಲ್ಲಿ ದೇಹದ ಮೇಲೆ ಸಂಗ್ರಹವಾದ ವಿಷ ಮತ್ತು ಕೊಳೆ ಸಂಪೂರ್ಣವಾಗಿ ಹೋಗುತ್ತದೆ.
ರಾತ್ರಿ ಸಮಯದಲ್ಲಿ ವಿಶ್ರಾಂತಿ ಬೇಕಾಗಿರುವುದರಿಂದ ನಿದ್ದೆ ಚೆನ್ನಾಗಿ ಬರುವುದಕ್ಕೆ ರಾತ್ರಿ ಸಮಯದಲ್ಲಿ ಸ್ನಾನ ಮಾಡುತ್ತಾರೆ.
ಆಯುರ್ವೇದದಲ್ಲಿ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಮತ್ತು ಸಂಜೆ ಸೂರ್ಯಾಸ್ತದ ಮೊದಲು ಸ್ನಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.
ಆಯುರ್ವೇದದ ಪ್ರಕಾರ ಮಧ್ಯಾಹ್ನ ಸ್ನಾನ ಮಾಡುವುದು ಸೂಕ್ತವಲ್ಲ. ಈ ರೀತಿ ಮಾಡಿದರೆ ಅನೇಕ ರೋಗಗಳು ಬರಬಹುದು.
ಮಧ್ಯಾಹ್ನ ಸ್ನಾನ ಮಾಡುವುದರಿಂದ ಬೆನ್ನು ನೋವು, ಮೊಣಕಾಲು ನೋವು ಮತ್ತು ಕಣ್ಣಿನ ಸಮಸ್ಯೆಗಳು ಕೂಡ ಉಂಟಾಗಬಹುದು.