ಎಸಿಯಲ್ಲಿ ಕುಳಿತುಕೊಳ್ಳುವವರಿಗೆ ಈ ಸಮಸ್ಯೆ ಬರಬಹುದು

Pic Credit: pinterest

By Preeti Bhat

24 June 2025

ಎಸಿ

ಬಿಸಿಲಾಗಲಿ, ಮಳೆಯಾಗಲಿ, ಚಳಿಯೇ ಇರಲಿ ಕೆಲವರಿಗೆ ಎಸಿ ಬೇಕೇ ಬೇಕು. ಆಫೀಸ್ ಹೋಗಲಿ ಮನೆಯಲ್ಲಿರಲಿ ಎಸಿ ಇಲ್ಲದೆ ಕುಳಿತುಕೊಳ್ಳುವುದೇ ಇಲ್ಲ.

ಆರೋಗ್ಯ

ಆದರೆ ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ತೊಂದರೆಗಳಾಗಬಹುದು ಎಂಬುದನ್ನು ಯೋಚಿಸಿದ್ದೀರಾ?

ಮೂಳೆ

ದಿನಪೂರ್ತಿ ಹವಾನಿಯಂತ್ರಿತ ಕೊಠಡಿಗಳಲ್ಲಿಯೇ ಇರುವುದು ಗೊತ್ತಿದ್ದೋ ಗೊತ್ತಿಲ್ಲದೆಯೋ ಮನುಷ್ಯನ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ಚಯಾಪಚಯ ಕ್ರಿಯೆ

ದೀರ್ಘಕಾಲದ ವರೆಗೆ ಕಡಿಮೆ ತಾಪಮಾನದಲ್ಲಿಯೇ ಇದ್ದಾಗ ದೇಹದ ಚಯಾಪಚಯ ಕ್ರಿಯೆಯು ಕ್ರಮೇಣ ನಿಧಾನವಾಗಲು ಪ್ರಾರಂಭಿಸುತ್ತದೆ.

ರಕ್ತದ ಹರಿವು

ಇದು ಮೂಳೆಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿ ಅವುಗಳನ್ನು ಬಲಪಡಿಸಲು ಅಗತ್ಯವಾದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

ಹಾಲು

ಮೂಳೆಗಳನ್ನು ಬಲವಾಗಿಡಲು ತಪ್ಪದೆ ಹಾಲು ಕುಡಿಯಿರಿ. ಹೆಚ್ಚುವರಿಯಾಗಿ, ಮೊಸರು, ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳು ಸಹ ಮೂಳೆಗಳಿಗೆ ಪ್ರಯೋಜನಕಾರಿ.

ಪಾಲಕ್

ಪಾಲಕ್ ಮತ್ತು ಬ್ರೊಕೊಲಿಯಂತಹ ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ.

ವಾಕಿಂಗ್

ನಮ್ಮ ಮೂಳೆಗಳು ಮತ್ತು ಸ್ನಾಯುಗಳು ಗಟ್ಟಿಯಾಗಿರಬೇಕು ಎಂದರೆ ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಅಥವಾ ಲಘು ವ್ಯಾಯಾಮ ಮಾಡಿ.