ಗರ್ಭದಲ್ಲಿಯೇ ಮಗು ಸ್ಮಾರ್ಟ್ ಆಗಲು ಈ ರೀತಿ ಮಾಡಿ
TV9 Kannada Logo For Webstory First Slide

18 April 2025

Pic credit - Pintrest

Author: Preethi Bhat

ಗರ್ಭದಲ್ಲಿಯೇ ಮಗು ಸ್ಮಾರ್ಟ್ ಆಗಲು ಈ ರೀತಿ ಮಾಡಿ

ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಎಷ್ಟೋ ವಿಷಯಗಳನ್ನು ಗ್ರಹಿಸುತ್ತದೆ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು.

ಗರ್ಭದಲ್ಲಿ ಮಗು

Pic credit - Pintrest

ಹಾಗಾಗಿಯೇ ಮಗು ಬೆಳೆಯುತ್ತಿರುವಾಗ ತಾಯಂದಿರು ಒಳ್ಳೆಯ ವಿಷಯಗಳನ್ನು ಮಾತನಾಡಬೇಕು, ಕೇಳಬೇಕು ಎಂದು ಹೇಳಲಾಗುತ್ತದೆ. 

ಒಳ್ಳೆಯ ವಿಷಯ

Pic credit - Pintrest

ಮಗುವಿಗೆ ಭಾಷೆಗಳು ಅರ್ಥವಾಗದಿದ್ದರೂ ಕೂಡ ಪದೇ ಪದೇ ಕೇಳುವ ಶಬ್ದವನ್ನು ಗ್ರಹಿಸುವ ಶಕ್ತಿ ಇರುತ್ತದೆ. 

ಶಬ್ದ ಗ್ರಹಿಸುವ ಶಕ್ತಿ 

Pic credit - Pintrest

ಮಗು ಹೊಟ್ಟೆಯಲ್ಲಿರುವಾಗ ಒಳ್ಳೆಯ ಸಂಗೀತ ಕೇಳಿ. ಜೊತೆಗೆ ಭಜನೆ, ಶ್ಲೋಕ, ಕಥೆಗಳನ್ನು ಕೇಳುವುದು ಕೂಡ ಒಳ್ಳೆಯದು. ಆದರೆ ಹೆಚ್ಚು ಹೊತ್ತು ಬೇಡ.

ಸಂಗೀತ ಕೇಳಿ

Pic credit - Pintrest

ಮಗು ಹೊಟ್ಟೆಯಲ್ಲಿ ಇರುವಾಗ ಒತ್ತಡ ಕಡಿಮೆ ಮಾಡಿಕೊಂಡು ಆದಷ್ಟು ಖುಷಿಯಾಗಿರಿ. ಕೀರ್ತನೆ, ನ್ರತ್ಯ, ಯಕ್ಷಗಾನ, ಹಾಸ್ಯ ಇರುವ ಕಥೆಗಳನ್ನು ಕೇಳಿ.

ಖುಷಿಯಾಗಿರಿ

Pic credit - Pintrest

ಬೆಳಿಗ್ಗೆ 20 ನಿಮಿಷ ತಾಜಾ ಗಾಳಿ ಹಾಗೂ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕುಳಿತುಕೊಳ್ಳಿ. ಈ ರೀತಿಯ ಅಭ್ಯಾಸ ಕಾಯಿಲೆಗಳಿಂದ ದೂರ ಇರಿಸುತ್ತದೆ.

ಸೂರ್ಯನ ಕಿರಣ

Pic credit - Pintrest

ನಿಯಮಿತವಾಗಿ ವ್ಯಾಯಾಮ ಮಾಡಿ ಜೊತೆಗೆ ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ. ಸಮಯ ಸಿಕ್ಕಾಗೆಲ್ಲಾ ನಿಮ್ಮ ಮಗುವಿನೊಂದಿಗೆ ಮಾತನಾಡಿ. 

ವ್ಯಾಯಾಮ ಮಾಡಿ 

Pic credit - Pintrest

ತಾಯಿ ಎಷ್ಟು ಉತ್ತಮ ಆಹಾರ ಸೇವಿಸುತ್ತಾಳೋ ಅಷ್ಟು ಮಗುವಿಗೆ ಪೌಷ್ಠಿಕಾಂಶ ಸಿಗುತ್ತದೆ. ಹಾಗಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯ.

ಮಗುವಿಗೆ ಪೌಷ್ಠಿಕಾಂಶ

Pic credit - Pintrest

ಹೊರಗಿನ ಆಹಾರಗಳನ್ನು ಸಾಧ್ಯವಾದಷ್ಟು ಸೇವನೆ ಮಾಡಬೇಡಿ. ಏನೇ ತಿನ್ನಬೇಕು ಎನಿಸಿದರೂ ಮನೆಯಲ್ಲಿಯೇ ಮಾಡಿ ತಿನ್ನಿ.

ಹೊರಗಿನ ಆಹಾರ

Pic credit - Pintrest