ಮೆದುಳಿನ ಆರೋಗ್ಯಕ್ಕೆ ವೀಳ್ಯದ ಎಲೆ, ಜೇನುತುಪ್ಪ ಸೇವಿಸಿ

Pic Credit: pinterest

By Preeti Bhat

12 June 2025

ಮೆದುಳು

ಮೆದುಳು ಆರೋಗ್ಯವಾಗಿ ಇರದಿದ್ದರೆ ನಮ್ಮ ಯಾವ ಕೆಲಸಗಳೂ ಸಹ ಸುಲಲಿತವಾಗಿ ನಡೆಯುವುದಿಲ್ಲ. ಇದರಿಂದ ನಮ್ಮ ಸ್ಮರಣಶಕ್ತಿ ಕಡಿಮೆಯಾಗುತ್ತದೆ.

ಅಜ್ಜಿಯ ಮನೆಮದ್ದು

ಆದರೆ ಹಿಂದೆ ಅಜ್ಜಿಯಂದಿರು ಮನೆಯಲ್ಲಿ ಮಾಡುವ ಸಣ್ಣ ಮದ್ದಿನಿಂದ ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ವೀಳ್ಯದ ಎಲೆ

ಸಾಮಾನ್ಯವಾಗಿ ವೀಳ್ಯದ ಎಲೆಗಳ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಪ್ರತಿ ಮನೆಯಲ್ಲಿಯೂ ಇದನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಕೆ ಮಾಡುತ್ತಾರೆ.

ಉಪಯೋಗ

ನಗರವಾಸಿಗಳ ಮನೆಗಳಲ್ಲಿ ಇದರ ಬಳಕೆ ಸ್ವಲ್ಪ ಕಡಿಮೆಯಾಗಿದ್ದರೂ ಸಹ, ಹಳ್ಳಿಗಳಲ್ಲಿ ಇದನ್ನು ಹೇರಳವಾಗಿ ಉಪಯೋಗ ಮಾಡಲಾಗುತ್ತದೆ.

ಜೇನುತುಪ್ಪ

ವೀಳ್ಯದ ಎಲೆಯನ್ನು ತೆಗೆದುಕೊಂಡು ಅದನ್ನು ಜೇನುತುಪ್ಪದಲ್ಲಿ ಅದ್ದಿ ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಕ್ಕಳಿಗೆ ಅದನ್ನು ತಿನ್ನಲು ಕೊಡಿ.

ಬುದ್ಧಿಶಕ್ತಿ

ಇದು ಬಹಳ ಸರಳವಾದ ಪ್ರಕ್ರಿಯೆಯಾಗಿದ್ದು ಹಿಂದಿನ ಕಾಲದಲ್ಲಿ ಅಜ್ಜಿಯಂದಿರು ಮಕ್ಕಳು- ಮೊಮ್ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಮಾಡುತ್ತಿದ್ದರು.

ಸ್ಮರಣಶಕ್ತಿ

ಈ ಮದ್ದು ನರಮಂಡಲದಲ್ಲಿನ ದೌರ್ಬಲ್ಯಗಳು ಕಡಿಮೆ ಮಾಡುತ್ತದೆ. ಮೆದುಳು ಸಕ್ರಿಯವಾಗಿ ಸ್ಮರಣಶಕ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ.

ಮನೆಮದ್ದು

ಈ ಮನೆಮದ್ದು ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ಅಧ್ಯಯನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ.