ಬ್ರೈನ್ ಸ್ಟ್ರೋಕ್ ಸಂಭವಿಸುವ ಮುನ್ನ ದೇಹದಲ್ಲಿ ಕಂಡುಬರುವ ಲಕ್ಷಣಗಳಿವು
ಮೆದುಳಿನ ಪಾರ್ಶ್ವವಾಯು ಅಥವಾ ಬ್ರೈನ್ ಸ್ಟ್ರೋಕ್ ಸಂಭವಿಸುವ ಮುನ್ನ ದೇಹವು ಕೆಲವು ಪ್ರಮುಖ ಸಂಕೇತಗಳನ್ನು ನೀಡುತ್ತದೆ.
ಬ್ರೈನ್ ಸ್ಟ್ರೋಕ್
Pic credit - Pintrest
ನಿಮ್ಮ ದೇಹದಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ.
ಸೂಕ್ತ ಚಿಕಿತ್ಸೆ
Pic credit - Pintrest
ಮುಖ ಇದ್ದಕ್ಕಿದ್ದಂತೆ ಒಂದು ಬದಿಗೆ ಜೋತು ಬಿದ್ದರೆ ಅಥವಾ ನಗುತ್ತಿರುವಾಗ ಒಂದು ಬದಿ ನಗು ಮಾಯವಾದರೆ , ಅದು ಬ್ರೈನ್ ಸ್ಟ್ರೋಕ್ ನ ಮೊದಲ ಚಿಹ್ನೆಯಾಗಿರಬಹುದು.
ಜೋತು ಬಿದ್ದರೆ
Pic credit - Pintrest
ಇದಲ್ಲದೇ ದೇಹದ ಒಂದು ಭಾಗ, ವಿಶೇಷವಾಗಿ ತೋಳು ಅಥವಾ ಕಾಲು, ಹಠಾತ್ ದೌರ್ಬಲ್ಯ, ಮರಗಟ್ಟುವಿಕೆ ಅಥವಾ ನಡೆಯಲು ಅಸ್ಥಿರತೆಯನ್ನು ಅನುಭವಿಸುತ್ತದೆ.
ಹಠಾತ್ ದೌರ್ಬಲ್ಯ
Pic credit - Pintrest
ಪದಗಳನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದಿರುವುದು, ಯಾರಾದರೂ ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು.
ಉಚ್ಚರಿಸಲು ಅಸಾಧ್ಯ
Pic credit - Pintrest
ಯಾವುದೇ ಕಾರಣವಿಲ್ಲದೆ ತೀವ್ರ ತಲೆನೋವು, ತಲೆತಿರುಗುವಿಕೆ ಅಥವಾ ಮೂರ್ಛೆ ಬಿದ್ದರೆ ಅದು ಮಿದುಳಿನ ಪಾರ್ಶ್ವವಾಯುವಿನ ಸಂಕೇತವಾಗಿರಬಹುದು.
ತಲೆತಿರುಗುವಿಕೆ
Pic credit - Pintrest
ಬ್ರೈನ್ ಸ್ಟ್ರೋಕ್ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಹಠಾತ್ ಮಸುಕಾದ ದೃಷ್ಟಿ ಅಥವಾ ಕತ್ತಲೆ, ಈ ಲಕ್ಷಣಗಳನ್ನೂ ಸಹ ಕಡೆಗಣಿಸಬೇಡಿ.
ಮಸುಕಾದ ದೃಷ್ಟಿ
Pic credit - Pintrest
ಬ್ರೈನ್ ಸ್ಟ್ರೋಕ್ ಸಂದರ್ಭದಲ್ಲಿ , ಪ್ರತಿ ನಿಮಿಷವೂ ಅಮೂಲ್ಯ. ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ.