ಗರ್ಭಿಣಿಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಏನಾಗುತ್ತೆ ನೋಡಿ

Pic Credit: pinterest

By Preeti Bhat

29 August 2025

ಕ್ಯಾಲ್ಸಿಯಂ ಕೊರತೆ

ಗರ್ಭಾವಸ್ಥೆಯಲ್ಲಿ ಬಹಳ ಜಾಗರೂಕರಾಗಿರುವುದು ಅವಶ್ಯವಾಗಿದೆ. ಅದರಲ್ಲಿಯೂ ಮಹಿಳೆಯರ ದೇಹದಲ್ಲಿ ಜೀವಸತ್ವ ಅಥವಾ ಕ್ಯಾಲ್ಸಿಯಂ ಕೊರತೆ ಇರಬಾರದು.

ಮೂಳೆಗಳು ದುರ್ಬಲವಾಗುತ್ತೆ

ಗರ್ಭಾವಸ್ಥೆಯಲ್ಲಿಯು ಮಗುವಿನ ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿರುತ್ತದೆ. ಮಗು ತಾಯಿಯ ದೇಹದಿಂದ ಕ್ಯಾಲ್ಸಿಯಂ ಪಡೆಯುತ್ತದೆ.

ಆಸ್ಟಿಯೊಪೊರೋಸಿಸ್‌

ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ, ಮಗುವಿನ ಮೇಲೆ ಮಾತ್ರವಲ್ಲ ಗರ್ಭಿಣಿಯ ಮೂಳೆಗಳು ಸಹ ದುರ್ಬಲವಾಗುತ್ತವೆ, ಇದು ಆಸ್ಟಿಯೊಪೊರೋಸಿಸ್‌ ಗೆ ಕಾರಣವಾಗಬಹುದು.

ದೌರ್ಬಲ್ಯಕ್ಕೆ ಕಾರಣ

ಕ್ಯಾಲ್ಸಿಯಂ ಕೊರತೆಯಿದ್ದಾಗ ಮಗುವಿನ ಮೂಳೆಗಳು ಸರಿಯಾಗಿ ಬೆಳೆಯುವುದಿಲ್ಲ. ಇದು ಜನನದ ನಂತರ ಮಗುವಿನಲ್ಲಿ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

ನರಗಳ ಬೆಳವಣಿಗೆಗೆ ಅಡ್ಡಿ

ಮಗುವಿಗೆ ಸಾಕಷ್ಟು ಕ್ಯಾಲ್ಸಿಯಂ ಸಿಗದಿದ್ದರೆ, ಅದು ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ. ಮಗುವಿನ ಹೃದಯ, ಸ್ನಾಯುಗಳು ಮತ್ತು ನರಗಳ ಬೆಳವಣಿಗೆಯ ಪರಿಣಾಮ ಬೀರುತ್ತದೆ.

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಪ್ರತಿದಿನ 1000 ರಿಂದ 1200 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ.

ಕ್ಯಾಲ್ಸಿಯಂ ಇರುವ ಆಹಾರ

ಕ್ಯಾಲ್ಸಿಯಂ ಅನ್ನು ಹಾಲು, ಮೊಸರು, ಚೀಸ್, ಸೊಪ್ಪು, ಎಳ್ಳು ಮತ್ತು ಬಾದಾಮಿ ಮುಂತಾದ ಆಹಾರ ಪದಾರ್ಥಗಳಿಂದ ಪಡೆಯಬಹುದು.

ಕ್ಯಾಲ್ಸಿಯಂ ಪೂರಕ

ಕ್ಯಾಲ್ಸಿಯಂ ಕೊರತೆಯಿದ್ದರೆ, ವೈದ್ಯರ ಸಲಹೆಯ ಮೇರೆಗೆ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳಬಹುದು.