ಮಗುವಿಗೆ ಹಲ್ಲು ಬರುವಾಗ ಈ ರೀತಿಯಾಗುತ್ತೆ ನೆನಪಿರಲಿ!

Pic Credit: gettyimages

By Preeti Bhatt

29 April 2025

ದೈಹಿಕ ಬದಲಾವಣೆ

ಮಗು ಹುಟ್ಟಿದ ನಂತರ ಒಂದೊಂದೇ ರೀತಿಯಲ್ಲಿ ದೈಹಿಕ ಬದಲಾವಣೆಗಳಾಗುವುದು ಬಹಳ ಸಹಜವಾದ ಪ್ರಕ್ರಿಯೆ.

ಹಲ್ಲು ಮೂಡುವುದಕ್ಕೆ ಆರಂಭ

ಅದರಲ್ಲೂ ಮಗುವಿಗೆ ಐದು ತಿಂಗಳುಗಳ ನಂತರ ಕೆಲವರಲ್ಲಿ ಆರು ತಿಂಗಳ ಬಳಿಕ ಹಲ್ಲು ಮೂಡುವುದಕ್ಕೆ ಆರಂಭವಾಗುತ್ತದೆ.

ಮಕ್ಕಳ ಒಸಡುಗಳಲ್ಲಿ ನೋವು

ಮಕ್ಕಳಲ್ಲಿ ಮೊದಲ ಹಲ್ಲುಗಳು ಮೂಡುವಾಗ ಮಕ್ಕಳ ಒಸಡುಗಳಲ್ಲಿ ನೋವು, ಕಿರಿಕಿರಿ ಕಂಡು ಬರುವುದರಿಂದ ಮಕ್ಕಳು ಹಠ ಮಾಡುವುದಕ್ಕೆ ಪ್ರಾಂಭಿಸುತ್ತಾರೆ.

ಬಾಯಲ್ಲಿ ಜೊಲ್ಲು

ಸಾಮಾನ್ಯವಾಗಿ ಮಗುವಿಗೆ ಹಲ್ಲು ಬರುವ ಸಮಯದಲ್ಲಿ ಮಗು ಬಾಯಲ್ಲಿ ಜೊಲ್ಲು ಸುರಿಸಲು ಆರಂಭ ಮಾಡುತ್ತದೆ.  

ಬಾಯಲ್ಲಿ ಇಟ್ಟುಕೊಂಡು ಜಗಿಯುತ್ತದೆ

ಕೈಯಲ್ಲಿ ಯಾವುದೇ ರೀತಿಯ ವಸ್ತು ಸಿಕ್ಕರೂ ಅದನ್ನು ತೆಗೆದುಕೊಂಡು ಬಾಯಲ್ಲಿ ಇಟ್ಟುಕೊಂಡು ಕಡಿಯುತ್ತದೆ ಅಥವಾ ಜಗಿಯುತ್ತದೆ.

ಸಿಕ್ಕ ಸಿಕ್ಕ ಬಟ್ಟೆ  ಕಡಿಯುತ್ತದೆ

ಸಿಕ್ಕ ಸಿಕ್ಕ ಬಟ್ಟೆಯನ್ನು ಬಾಯಿಯಲ್ಲಿ ಹಾಕಿ ತುರುಕಲು ಆರಂಭ ಮಾಡುತ್ತದೆ. ಅಥವಾ ಅದನ್ನು ಕಡಿಯುತ್ತದೆ.

ಒಸಡುಗಳು ಊದಿಕೊಳ್ಳುತ್ತದೆ

ಹಲ್ಲು ಬರುವಾಗ ಕೆಲವು ಶಿಶುಗಳಲ್ಲಿ ಒಸಡುಗಳು ಊದಿಕೊಳ್ಳುತ್ತದೆ ಕೆಲವು ಮಕ್ಕಳಲ್ಲಿ ಬಾಯಿ ಕೆಂಪಗಾಗುತ್ತದೆ.

ಸಿಟ್ಟು ಮಾಡಿಕೊಳ್ಳಲು ಆರಂಭ

ಇಂತಹ ಸಮಯದಲ್ಲಿ ಮಗು ಕಾರಣಗಳಿಲ್ಲದೆ ಅಳುವುದು, ಸಿಟ್ಟು ಮಾಡಿಕೊಳ್ಳಲು ಆರಂಭ ಮಾಡುತ್ತದೆ.