Pic Credit: pinterest
By Preeti Bhat
8 August 2025
ಡೆಂಗ್ಯೂ ಹಾವಳಿ ಈ ಭಾರಿಯೂ ಜೋರಾಗಿಯೇ ಇದೆ. ಹಾಗಾಗಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಅನುಸರಿಸಬೇಕು.
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವತ್ತ ಗಮನಹರಿಸಲು ಸಮತೋಲಿತ ಆಹಾರವನ್ನು ಸೇವಿಸಿ.
ಆಹಾರದಲ್ಲಿ ತಾಜಾ ಹಣ್ಣು, ತರಕಾರಿ ಮತ್ತು ಬೀಜಗಳನ್ನು ಸೇವನೆ ಮಾಡಿ, ಜೊತೆಗೆ ಸಾಕಷ್ಟು ನೀರು ಕುಡಿಯಿರಿ. ಕಡಿಮೆ ಕೊಬ್ಬಿನ ಪ್ರೋಟೀನ್, ಧಾನ್ಯಗಳನ್ನು ಸೇವಿಸಿ.
ಪ್ರತಿದಿನ ವ್ಯಾಯಾಮ ಮಾಡುವುದು ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಡೆಂಗ್ಯೂ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಆದ್ದರಿಂದ, ಹಗಲಿನ ವೇಳೆಯಲ್ಲಿ ಕಾಡುವ ಈ ಸೊಳ್ಳೆಗಳಿಂದ ತಪ್ಪಿಸಿಕೊಳ್ಳುವುದು ಅವಶ್ಯಕ.
ಈ ಸೊಳ್ಳೆಗಳಿಂದ ದೂರವಿರಲು, ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ. ಸೊಳ್ಳೆಗಳು ಹೆಚ್ಚಾಗಿ ತೋಳುಗಳು ಮತ್ತು ಕಾಲಿನ ಭಾಗದಲ್ಲಿ ಹೆಚ್ಚು ಕಚ್ಚುತ್ತವೆ.
ಸೊಳ್ಳೆಗಳು ಬರದಂತೆ ತಡೆಯಲು ಬೇವಿನ ಎಣ್ಣೆ ಸ್ಪ್ರೇ, ಮೆಣಸಿನ ಸ್ಪ್ರೇ ಮತ್ತು ಬಿರಿಯಾನಿ ಎಲೆಗಳಿಂದ ಬರುವ ಹೊಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.
ಸೊಳ್ಳೆಗಳು ಬರದಂತೆ ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಸಣ್ಣ ನೆಟ್ ಹಾಕಿ. ಮನೆಯ ಸುತ್ತಲೂ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ.