Pic Credit: pinterest
By Preeti Bhat
27 June 2025
ಬಾಳೆ ಹೂವುಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.
ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತದೆ. ಬಾಳೆ ಹೂವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ.
ಬಾಳೆ ಹೂವುಗಳಲ್ಲಿರುವ ವಿಟಮಿನ್ ಎ ಮತ್ತು ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಕಾಲೋಚಿತ ಕಾಯಿಲೆಗಳನ್ನು ತಡೆಯುತ್ತವೆ.
ಬಾಳೆ ಹೂವುಗಳಲ್ಲಿರುವ ಮೆಗ್ನೀಸಿಯಮ್ ಅಂಶ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಆತಂಕ, ಖಿನ್ನತೆಯನ್ನು ತಡೆಯುತ್ತದೆ.
ಬಾಳೆ ಹೂವುಗಳಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಅವು ನೋವು, ಉರಿಯೂತ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ.
ಹಾಲುಣಿಸುವ ತಾಯಂದಿರು ಬಾಳೆ ಹೂವುಗಳನ್ನು ಸೇವಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಮಗು ಆರೋಗ್ಯವಾಗಿರುತ್ತದೆ.
ಬಾಳೆ ಹೂವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.
50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ದುರ್ಬಲ ಮೂತ್ರದ ಹರಿವು, ಮೂತ್ರ ಸೋರಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಅಂತವರು ತಮ್ಮ ಆಹಾರದಲ್ಲಿ ಈ ಹೂವನ್ನು ಬಳಸಿ.