06 April 2025

Pic credit -  Pintrest

Author: Malashree

ಮೊಸರಿನೊಂದಿಗೆ ಇವುಗಳನ್ನು ಅಪ್ಪಿತಪ್ಪಿಯೂ ತಿನ್ಬೇಡಿ

ಮೊಸರಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟೀನ್ ಮೂಳೆಗಳನ್ನು ಬಲಪಡಿಸುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಆದರೆ ಮೊಸರಿನೊಂದಿಗೆ ಕೆಲವು ವಸ್ತು ತಿನ್ನಬಾರದು.

Pic credit -  Pintrest

ಮೀನು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ವಿಷಕಾರಿ ಅಂಶ ಉತ್ಪತ್ತಿಯಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡಿ ವಿವಿಧ ರೋಗಗಳಿಗೆ ಕಾರಣವಾಗಬಹುದು.

Pic credit -  Pintrest

ಮಸಾಲೆಯುಕ್ತ ಆಹಾರಗಳನ್ನು ಮೊಸರಿನೊಂದಿಗೆ ಸೇವಿಸಬೇಡಿ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎದೆಯುರಿ, ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು.

Pic credit -  Pintrest

ಚಹಾ, ಕಾಫಿ ಸೇರಿದಂತೆ  ಸಿಹಿ ವಸ್ತುಗಳನ್ನು ಮೊಸರಿನೊಂದಿಗೆ ಸೇವಿಸುವುದರಿಂದ ಜೀರ್ಣಕಾರಿ  ಸಮಸ್ಯೆ ಉಂಟಾಗಬಹುದು. ಜೊತೆಗೆ ತೂಕ ಹೆಚ್ಚಾಗಲು ಕಾರಣವಾಗಬಹುದು.

Pic credit -  Pintrest

ಮೊಟ್ಟೆ ಮತ್ತು ಮೊಸರು ಎರಡೂ ಒಟ್ಟಿಗೆ ತಿನ್ನುವುದರಿಂದ ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ ಸಮಸ್ಯೆ ಉಂಟಾಗಬಹುದು.

Pic credit -  Pintrest

ಉಪ್ಪಿನಕಾಯಿ ಮತ್ತು ಮೊಸರು ಎರಡೂ ಪ್ರಿಬಯಾಟಿಕ್‌ಗಳ ಉತ್ತಮ ಮೂಲಗಳಾಗಿವೆ, ಆದರೆ ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ  ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುತ್ತದೆ.

Pic credit -  Pintrest

ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಹಾಲು ಮತ್ತು ಮೊಸರನ್ನು ಎಂದಿಗೂ ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು.

Pic credit -  Pintrest

ಯಾವಾಗಲೂ ಮೊಸರನ್ನು ತಾಜಾವಾಗಿಯೇ ಸೇವಿಸಿ. ಮೊಸರನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ತಿನ್ನಬಹುದು. ಅದಕ್ಕೆ ಸ್ವಲ್ಪ ಜೀರಿಗೆ ಅಥವಾ ಕರಿಮೆಣಸನ್ನು ಸಹ ಬೆರೆಸಬಹುದು.

Pic credit -  Pintrest

ಸಲಾಡ್‌ಗೆ  ಬೆರೆಸಿ  ಸಹ ಮೊಸರನ್ನು ತಿನ್ನಬಹುದು. ಜೊತೆಗೆ ಮೊಸರು ಮತ್ತು ಹಣ್ಣುಗಳನ್ನು ತಿನ್ನುವುದರ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಲಿ.

Pic credit -  Pintrest