Pic Credit: pinterest
By Sai Nanda
22 September 2025
ಬೆಂಡೆಕಾಯಿ ರುಚಿಜಕರವಾದ ತರಕಾರಿಗಳಲ್ಲಿ ಒಂದು. ಹೀಗಾಗಿ ಇದರಿಂದ ಪಲ್ಯ, ಸಾಂಬಾರ್, ಫ್ರೈ ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ.
ಬೆಂಡೆಕಾಯಿಯೂ ವಿಟಮಿನ್ ಎ, ಸಿ, ಮೆಗ್ನಿಸಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಸೇರಿದಂತೆ ಫೋಷಕಾಂಶಗಳಿಂದ ಸಮೃದ್ಧವಾಗಿದೆ.
ನಿಯಮಿತವಾಗಿ ಬೆಂಡೆಕಾಯಿಯನ್ನು ಸೇವಿಸಿದ್ರೆ ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಈ ಕೆಲವು ಆಹಾರಗಳನ್ನು ಬೆಂಡೆಕಾಯಿಯೊಂದಿಗೆ ಸೇವಿಸುವುದು ಒಳ್ಳೆಯದಲ್ಲ, ಇದು ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.
ಬೆಂಡೆಕಾಯಿಯೊಂದಿಗೆ ಹಾಲನ್ನು ಎಂದಿಗೂ ಸೇವಿಸಬೇಡಿ, ಇದರಲ್ಲಿರುವ ಆಕ್ಸಲೇಟ್ ಗಳು ಹಾಲಿನಲ್ಲಿ ಸೇರಿಕೊಂಡು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ.
ಹುಳಿ ಮೊಸರನ್ನು ಬೆಂಡೆಕಾಯಿಯೊಂದಿಗೆ ಸೇವಿಸಬೇಡಿ. ನಿಂಬೆಹಣ್ಣು ಹಾಗೂ ಟೊಮೊಟೊಯಂತಹ ಹುಳಿ ಆಹಾರ ಸೇವನೆಯನ್ನು ತಪ್ಪಿಸಿ.
ಹಾಗಲಕಾಯಿ ಹಾಗೂ ಬೆಂಡೆಕಾಯಿಯನ್ನು ಒಟ್ಟಿಗೆ ಸೇವಿಸಬೇಡಿ, ಇದರ ಸೇವನೆಯೂ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ.
ಬೆಂಡೆಕಾಯಿ ಸೇವನೆಯ ಬಳಿಕ ಚಹಾ ಕುಡಿಯಬೇಡಿ. ಇದರಲ್ಲಿರುವ ಟ್ಯಾನಿನ್ ಅಂಶವೂ ಬೆಂಡೆಕಾಯಿಯಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳದಂತೆ ತಡೆಯುತ್ತದೆ.