ಊಟವಾದ ತಕ್ಷಣ ನೀರು ಕುಡಿತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಜೋಕೆ

Pic Credit: pinterest

By Sai Nanda

12 September  2025

ನೀರು ಕುಡಿಯುವ ಅಭ್ಯಾಸ

ಹೆಚ್ಚಿನವರಿಗೆ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಹೆಚ್ಚು ನೀರು ಕುಡಿಯುವುದು

ಕೆಲವರು ಊಟವಾದ ತಕ್ಷಣ ಎರಡರಿಂದ ಮೂರು ಲೋಟ ನೀರು ಕುಡಿಯುತ್ತಾರೆ, ಆದರೆ ನೀವು ಈ ರೀತಿ ಮಾಡುತ್ತಿದ್ರೆ ಇಂದೇ ನಿಲ್ಲಿಸುವುದು ಸೂಕ್ತ.

ಜೀರ್ಣಕಾರಿ ಕಿಣ್ವಗಳು ದುರ್ಬಲ

ಆಹಾರವನ್ನು ಒಡೆಯಲು ಅಗತ್ಯವಾದ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ತಕ್ಷಣ ಹೆಚ್ಚು ನೀರು ಕುಡಿದಾಗ ಈ ಕಿಣ್ವಗಳು ದುರ್ಬಲಗೊಳ್ಳುತ್ತವೆ.

ಅಪೂರ್ಣ ಜೀರ್ಣಕ್ರಿಯೆ

ಈ ಕಿಣ್ವಗಳು ದುರ್ಬಲಗೊಂಡರೆ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ಅಸ್ವಸ್ಥತೆಗೆ ಕಾರಣವಾಗಬಹುದು.

ಹೊಟ್ಟೆಯ ಆಮ್ಲ ದುರ್ಬಲ

ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆಯ ಆಮ್ಲ ದುರ್ಬಲಗೊಳ್ಳುತ್ತದೆ. ಇದು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

ಇದು ಸರಿಯಾದ ವಿಧಾನ

ಊಟದ ಸಮಯದಲ್ಲಿ ಅಥವಾ ನಂತರ ಸ್ವಲ್ಪ ಪ್ರಮಾಣದ ನೀರು ಕುಡಿಯುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಈ ಅಭ್ಯಾಸ ತಪ್ಪಿಸಿ

ಊಟದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದನ್ನು ತಪ್ಪಿಸಬೇಕು. ಮಿತವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ವೈದ್ಯರ ಸಲಹೆ ಅಗತ್ಯ

ಆಮ್ಲೀಯತೆ, ಅಜೀರ್ಣ ಹಾಗೂ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ವೈದ್ಯರ ಸಲಹೆ ಮೇರೆಗೆ ಈ ಅಭ್ಯಾಸ ಬೆಳೆಸಿಕೊಳ್ಳಿ.