ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸ್ತೀರಾ? ಹಾಗಾದ್ರೆ ಈ ವಿಚಾರ ತಿಳಿದಿರಲಿ

Pic Credit: pinterest

By Sai Nanda

10 September  2025

ತುಪ್ಪ ಸೇವನೆ

ಕೆಲವರಿಗೆ ತುಪ್ಪವಿಲ್ಲದೇ ಊಟನೇ ಸೇರಲ್ಲ. ಅನ್ನಕ್ಕೆ ಒಂದೆರಡು ಚಮಚ ತುಪ್ಪ ಹಾಕಿ ಸೇವಿಸಿದ್ರೇನೆ ತೃಪ್ತಿ.

ಪೋಷಕಾಂಶಗಳಿಂದ ಸಮೃದ್ಧ

ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ಸೇರಿದಂತೆ ಪ್ರೋಟೀನ್ ಮತ್ತು ಕೊಬ್ಬನ್ನು ಕರಗಿಸುವ ಜೀವಸತ್ವಗಳಿವೆ.

ಆರೋಗ್ಯಕ್ಕೆ ಒಳ್ಳೆಯದು

ಆಯುರ್ವೇದ ತಜ್ಞರು ಪ್ರತಿದಿನ ಒಂದು ಚಮಚ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ತುಪ್ಪವು ಈ ಕೆಲ ಆರೋಗ್ಯ ಸಮಸ್ಯೆ ಇರೋರಿಗೆ  ಒಳ್ಳೆಯದಲ್ಲ.

ಜೀರ್ಣಕ್ರಿಯೆ

ತುಪ್ಪವು ಉತ್ತಮ ಕೊಬ್ಬನ್ನು ಹೊಂದಿದ್ದು, ಇದರ ನಿಯಮಿತ ಸೇವನೆ ಆಹಾರ ಬೇಗನೇ ಜೀರ್ಣವಾಗಲು ಸಹಾಯ ಮಾಡುತ್ತದೆ.

ಕರುಳಿನ ಆರೋಗ್ಯ

ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುವ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.

ಚರ್ಮದ ಹೊಳಪು

ತುಪ್ಪದಲ್ಲಿ ಕೊಬ್ಬಿನಾಮ್ಲ ಅಧಿಕವಾಗಿದ್ದು, ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಮಲಬದ್ಧತೆ ಸಮಸ್ಯೆ

ತುಪ್ಪ ಸೇವನೆಯಿಂದ ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗಳು ದೂರಾಗುತ್ತವೆ.

ಈ ಸಮಸ್ಯೆ ಇದ್ದವರಿಗೆ ಒಳ್ಳೆಯದಲ್ಲ

ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಇರುವವರು  ಹಾಗೂ ಮಧುಮೇಹದಿಂದ ಬಳಲುತ್ತಿರುವವರು ತುಪ್ಪ ಸೇವನೆಯಿಂದ ದೂರವಿರುವಂತೆ ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.