ಮಳೆಗಾಲದಲ್ಲಿ ಕಂಡುಬರುವ ಚರ್ಮದ ಸಮಸ್ಯೆ ತಡೆಯಲು ಈ ಸಲಹೆ ಟ್ರೈ ಮಾಡಿ

Pic Credit: pinterest

By Preeti Bhat

04 July 2025

ರೋಗ

ಮಳೆಗಾಲ ಆರಂಭವಾದರೆ ಸಾಲು ಸಾಲು ರೋಗಗಳು ಕೂಡ ಬೆನ್ನಟ್ಟಿ ಬರುತ್ತದೆ. ಅದರಲ್ಲಿಯೂ ವಿವಿಧ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸೋಂಕು ಹೆಚ್ಚಾಗಿರುತ್ತದೆ.

ಅಭ್ಯಾಸ

ಮಳೆಗಾಲ ಆರಂಭವಾದಾಗಲೇ ಇದಕ್ಕೆ ಪೂರಕವಾಗಿರುವ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ಆರೋಗ್ಯಕರ ಅಭ್ಯಾಸಗಳು ಸೋಂಕುಗಳಿಂದ ನಿಮ್ಮನ್ನು ರಕ್ಷಿಸಬಹುದು.

ಸೊಳ್ಳೆ

ಮಳೆಗಾಲದಲ್ಲಿ ಕಂಡು ಬರುವ ತೇವಾಂಶದಿಂದಾಗಿ, ಸೊಳ್ಳೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದು ವಿವಿಧ ರೀತಿಯ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು.

ಮಲೇರಿಯಾ

ಈ ಋತುವಿನಲ್ಲಿ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಗಂಭೀರ ವೈರಲ್ ಸೋಂಕುಗಳು ಬರುವ ಸಾಧ್ಯತೆಯೂ ಇರುತ್ತದೆ.

ಆಂಟಿ ಫಂಗಲ್ ಪೌಡರ್

ಶಿಲೀಂಧ್ರ ಸೋಂಕುಗಳು ಮತ್ತು ಯಾವುದೇ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸೋಂಕನ್ನು ತಪ್ಪಿಸಲು, ಆಂಟಿ ಫಂಗಲ್ ಪೌಡರ್ ಬಳಸುವುದು ಉತ್ತಮ.

ಉಗುರು ಬಿಡಬೇಡಿ

ಮಳೆಗಾಲದಲ್ಲಿ  ಉಗುರು ಬಿಡಬೇಡಿ. ಅವುಗಳನ್ನು ಚಿಕ್ಕದಾಗಿ ಇರುವಂತೆ ನೋಡಿಕೊಳ್ಳಿ. ಕೊಳಕು ಕೈಗಳಿಂದ ನಿಮ್ಮ ಮುಖವನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ.

ಅರಿಶಿನ ಹಾಲು

ಸಾಧ್ಯವಾದರೆ ಪ್ರತಿನಿತ್ಯ ಅರಿಶಿನ ಹಾಲು ಕುಡಿಯಲು ಪ್ರಯತ್ನಿಸಿ. ನಿಮ್ಮ ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿರಿಸಿಕೊಳ್ಳಿ, ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

ಅರಿಶಿನ ಹಾಲು

ಸಾಧ್ಯವಾದರೆ ಪ್ರತಿನಿತ್ಯ ಅರಿಶಿನ ಹಾಲು ಕುಡಿಯಲು ಪ್ರಯತ್ನಿಸಿ. ನಿಮ್ಮ ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿರಿಸಿಕೊಳ್ಳಿ, ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.