ಅತಿಯಾಗಿ ತಿಂದರೆ ಲಿವರ್ ಹಾಳಾಗುತ್ತದೆಯೇ?

Pic Credit: pinterest

By Preeti Bhat

24 May 2025

ಆರೋಗ್ಯ ಸಮಸ್ಯೆ

ಅತಿಯಾಗಿ ತಿನ್ನುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬಹುದು.

ಫ್ಯಾಟಿ ಲಿವರ್

ಕಳಪೆ ಆಹಾರ ಪದ್ಧತಿ, ಅತಿಯಾಗಿ ತಿನ್ನುವುದು ಮತ್ತು ಒತ್ತಡದ ಜೀವನಶೈಲಿಯಿಂದಾಗಿ ಫ್ಯಾಟಿ ಲಿವರ್ ಸಮಸ್ಯೆ ವೇಗವಾಗಿ ಏರಿಕೆಯಾಗುತ್ತಿದೆ.

ಕೊಬ್ಬಿನ ಯಕೃತ್ತು

ಪ್ರತಿ 3 ಜನರಲ್ಲಿ ಒಬ್ಬರು ಫ್ಯಾಟಿ ಲಿವರ್ ನಿಂದ ಬಳಲುತ್ತಿದ್ದಾರೆ. ಅದಲ್ಲದೆ ಈ ಸಮಸ್ಯೆ ಮಕ್ಕಳನ್ನು ಬಿಟ್ಟಿಲ್ಲ. 3 ರಲ್ಲಿ 1 ಮಕ್ಕಳು ಕೊಬ್ಬಿನ ಯಕೃತ್ತಿನಿಂದ ಬಳಲುತ್ತಿದ್ದಾರೆ.

ಸಂಸ್ಕರಿಸಿದ ಆಹಾರ

ವ್ಯಾಯಾಮದ ಕೊರತೆ ಮತ್ತು ಕೆಟ್ಟ ಜೀವನಶೈಲಿ ಕೂಡ ಯಕೃತ್ತಿಗೆ ಹಾನಿ ಮಾಡುತ್ತಿದೆ. ಸಕ್ಕರೆ ಪಾನೀಯ, ಸಂಸ್ಕರಿಸಿದ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.

ಹಣ್ಣು, ತರಕಾರಿ

ಪ್ರತಿನಿತ್ಯವೂ ತಾಜಾ ಹಣ್ಣು, ಹಸಿರು ತರಕಾರಿ, ಧಾನ್ಯ ಮತ್ತು ತೆಳ್ಳಗಿನ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ಔಷಧಿ

ಆಹಾರವು ನಮ್ಮ ಹೊಟ್ಟೆ ತುಂಬುವುದಕ್ಕೆ ಮಾತ್ರವಲ್ಲ ಅದು ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಪಿತ್ತಜನಕಾಂಗ

ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು, ಅನಗತ್ಯ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸಿ.

ಒಳ್ಳೆಯ ಆಹಾರ

ರೋಗಗಳ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಒಳ್ಳೆಯ ಆಹಾರಗಳ ಸೇವನೆ ಮಾಡುವ ಮೂಲಕ ಬಲಪಡಿಸಿಕೊಳ್ಳಿ.