Pic Credit: pinterest
By Preeti Bhat
23 May 2025
ಕಣ್ಣುಗಳಿಗೂ ಕ್ಯಾನ್ಸರ್ ಬರಬಹುದು. ಅಷ್ಟೇ ಅಲ್ಲ, ಈ ಕಣ್ಣಿನ ಕ್ಯಾನ್ಸರ್ ದೇಹದಾದ್ಯಂತ ಹರಡಬಹುದು.
ಇದು ಆರಂಭಿಕ ಹಂತದಲ್ಲಿರುವಾಗ, ಕಣ್ಣುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ಅವುಗಳನ್ನು ನಿರ್ಲಕ್ಷಿಸಬಾರದು.
ಕಣ್ಣಿನಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಕಂಡುಬರಬಹುದು. ಇದರಲ್ಲಿ ಕಣ್ಣುಗಳಲ್ಲಿ ಗೆಡ್ಡೆ ಬೆಳೆಯುವುದು ಕೂಡ ಒಂದು.
ಅದರಲ್ಲಿಯೂ ಕಣ್ಣಿನ ಕ್ಯಾನ್ಸರ್‌ಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ದೇಹದಾದ್ಯಂತ ಹರಡಬಹುದು.
ಅದರಲ್ಲಿಯೂ ನೀವು ಆರಂಭದಲ್ಲಿ ಮಾಡುವ ಚಿಕಿತ್ಸೆ ಕ್ಯಾನ್ಸರ್ ಹೆಚ್ಚಿಸುವುದನ್ನು ತಡೆಯಬಹುದು.
ಕಣ್ಣಿನ ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿದ್ದು, ಕಣ್ಣಿನ ಅಥವಾ ಐರಿಸ್‌ನ ಬಣ್ಣದ ಭಾಗದಲ್ಲಿ ಬೆಳೆಯುವ ಐರಿಸ್ ಮೆಲನೋಮ.
ನಿಮ್ಮ ಕಣ್ಣಿನ ಮಸೂರಗಳಲ್ಲಿ ಬೆಳೆಯುವ ಸಿಲಿಯರಿ ಬಾಡಿ ಮೆಲನೋಮ, ಮತ್ತು ನಿಮ್ಮ ಕಣ್ಣಿನ ಪದರದಲ್ಲಿ ರೂಪುಗೊಳ್ಳುವ ಕೊರೊಯ್ಡಲ್ ಮೆಲನೋಮ ಸೇರಿವೆ.
ಈ ಕ್ಯಾನ್ಸರ್ ಕಂಡು ಬರುವ ಮೊದಲು ದೃಷ್ಟಿ ದುರ್ಬಲಗೊಳ್ಳುವುದು, ಮಸುಕಾದ ದೃಷ್ಟಿ, ಕಣ್ಣಿನಲ್ಲಿ ಕಲೆಗಳು, ಕಿರಿಕಿರಿ ಈ ರೀತಿಯ ಲಕ್ಷಣ ಕಂಡುಬರುತ್ತದೆ.