Pic Credit: pinterest
By Preeti Bhat
07 July 2025
ರಕ್ತ ಕ್ಯಾನ್ಸರ್.. ಇದು ಜೀವಕ್ಕೆ ಅಪಾಯಕಾರಿಯಾದಂತಹ ಆರೋಗ್ಯ ಸಮಸ್ಯೆ. ಇದರಲ್ಲಿಯೇ ಅನೇಕ ವಿಧಗಳಿವೆ.
ವ್ಯಕ್ತಿಯ ದೇಹದಲ್ಲಿ ಕಂಡು ಬರುವಂತಹ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾದಂತಹ ಪರಿಸ್ಥಿತಿಗಳನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ.
ಆಯಾಸ, ಆಲಸ್ಯದ ಜೊತೆಗೆ ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಸೋಂಕುಗಳು ನಿಯಮಿತವಾಗಿ ಸಂಭವಿಸುವುದು.
ಬಿಳಿ ರಕ್ತ ಕಣಗಳ ಸಂಖ್ಯೆ ಇಳಿಕೆಯಾಗಿ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳ್ಳುವುದು, ವೈರಸ್, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಮಸ್ಯೆ ಹೆಚ್ಚಾಗುವುದು.
ಮೂಗಿನಿಂದ ರಕ್ತಸ್ರಾವ, ಒಸಡುಗಳಿಂದ ರಕ್ತಸ್ರಾವ, ಮತ್ತು ಸಣ್ಣ ಪೆಟ್ಟಾದರೂ ಅದು ದೊಡ್ಡ ಗಾಯಗಳಾಗುವುದು. ರಕ್ತ ಹೆಪ್ಪುಗಟ್ಟುವಿಕೆ ನಿಧಾನವಾಗುವುದು.
ಕಂಕುಳಲ್ಲಿ, ಕುತ್ತಿಗೆ ಮತ್ತು ತೊಡೆ ಸಂದುಗಳಲ್ಲಿ ಚರ್ಮದ ಕೆಳಗೆ ಉಂಡೆಗಳು ರೂಪುಗೊಳ್ಳುತ್ತವೆ. ಇವು ಲಿಂಫೋಮಾ ಅಥವಾ ಇತರ ರಕ್ತ ಸಂಬಂಧಿತ ಕಾಯಿಲೆಗಳ ಸೂಚನೆಯಾಗಿರುತ್ತದೆ.
ಯಾವುದೇ ಆಹಾರ ಅಥವಾ ವ್ಯಾಯಾಮದ ಹೊರತಾಗಿಯೂ, ತೂಕ ಕಡಿಮೆಯಾಗುವುದು, ನಿದ್ರೆ ಮಾಡುವಾಗ ಅತಿಯಾಗಿ ಬೆವರುವುದು.
ಮೂಳೆಗಳು ಮತ್ತು ಕೀಲುಗಳಲ್ಲಿ ನೋವು ಕಂಡು ಬರುವುದು. ಹೊಟ್ಟೆ ತುಂಬಿದಂತೆ ಭಾಸವಾಗುವುದು, ಯಕೃತ್ತು ದೊಡ್ಡದಾಗುವುದು. ಇವೆಲ್ಲವೂ ರಕ್ತ ಕ್ಯಾನ್ಸರ್ ಬರುವ ಮುನ್ಸೂಚನೆ ಆಗಿರಬಹುದು.