ಸಿಹಿತಿಂಡಿಯನ್ನು ಈ ಸಮಯದಲ್ಲಿ ತಿಂದ್ರೆ ಸಮಸ್ಯೆ ತಪ್ಪಿದ್ದಲ್ಲ

Pic Credit: pinterest

By Preeti Bhat

4 August 2025

ಸಿಹಿತಿಂಡಿ

ಸಿಹಿತಿಂಡಿಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಸಿಹಿತಿಂಡಿ, ಬಿಸ್ಕತ್ತು ಮತ್ತು ಚಾಕೊಲೇಟ್‌ ಗಳನ್ನು ಹೆಚ್ಚು ತಿನ್ನುತ್ತಾರೆ.

ಟೈಪ್ 2 ಮಧುಮೇಹ

ಬೆಳಿಗ್ಗೆ ಎದ್ದ ತಕ್ಷಣ ಸಿಹಿ ತಿಂಡಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರೀತಿಯ ಅಭ್ಯಾಸದಿಂದ ಟೈಪ್ 2 ಮಧುಮೇಹ ಬರಬಹುದು.

ಇನ್ಸುಲಿನ್

ಬೆಳಗ್ಗಿನ ಸಮಯದಲ್ಲಿ ಸಿಹಿತಿಂಡಿಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದು ಇನ್ಸುಲಿನ್ ಹಾರ್ಮೋನ್ ಹೆಚ್ಚಿನ ಬಿಡುಗಡೆಗೆ ಕಾರಣವಾಗುತ್ತದೆ

ನೀಡುತ್ತದೆ

ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದು ತಕ್ಷಣಕ್ಕೆ ಶಕ್ತಿಯನ್ನು ನೀಡುತ್ತದೆಯಾದರೂ, ನಂತರ ಅದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ರೋಗ ನಿರೋಧಕ ಶಕ್ತಿ

ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವ ಅಭ್ಯಾಸ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.

ಬೊಜ್ಜು

ಬೆಳಿಗ್ಗೆ ಸಿಹಿಯಾದ ಆಹಾರ ತಿಂದ್ರೆ ಬೊಜ್ಜು ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನುವುದನ್ನು ತಪ್ಪಿಸಿ.

ಅಸಿಡಿಟಿ, ಅಜೀರ್ಣ

ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದರಿಂದ ಗ್ಯಾಸ್ ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ.

ಊಟದ ನಂತ್ರ ಸಿಹಿ ತಿನ್ನಿ

ಹಾಗಾಗಿ ಯಾವಾಗಲೂ ಊಟ ಅಥವಾ ತಿಂಡಿಯ ನಂತರ ಸಿಹಿತಿಂಡಿಗಳನ್ನು ತಿನ್ನುವ ಅಭ್ಯಾಸ ಬಹಳ ಉತ್ತಮ ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.