Pic Credit: pinterest
By Sai Nanda
15 September 2025
ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುದೊಡ್ಡ ಸವಾಲು. ಉತ್ತಮ ಅಭ್ಯಾಸಗಳಿಂದ ಆರೋಗ್ಯವಂತರಾಗಿರಲು ಸಾಧ್ಯ.
ಕೆಲವೊಮ್ಮೆ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಈ ವೇಳೆ ದಣಿವು, ಆಯಾಸದಂತಹ ಅನುಭವವಾಗುತ್ತದೆ.
ದೇಹವು ನಿರ್ಜಲೀಕರಣಗೊಂಡಾಗ ನೀರಿನ ಜೊತೆಗೆ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಅತ್ಯಗತ್ಯ.
ನೈಸರ್ಗಿಕ ಪಾನೀಯಗಳ ಸೇವನೆಯೂ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ದೇಹವನ್ನು ಹೈಡ್ರೇಟ್ ಆಗಿಸಲು ಸಹಕಾರಿಯಾಗಿದೆ.
ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ದಣಿವನ್ನು ನಿವಾರಿಸಿ, ಇದರ ತಾಜಾತನವು ಮನಸ್ಥಿತಿಯನ್ನು ಸುಧಾರಿಸುತ್ತದೆ.
ತೆಂಗಿನ ನೀರಿನ ನಿಯಮಿತ ಸೇವನೆಯೂ ಎಲೆಕ್ಟೋಲೈಟ್ ಅನ್ನು ಸಮತೋಲನಗೊಳಿಸುತ್ತದೆ. ನೀರಿನ ಕೊರತೆಯನ್ನು ಕಡಿಮೆ ಮಾಡಿ ಆಯಾಸವನ್ನು ನಿವಾರಿಸುತ್ತದೆ.
ನೀರಿನ ಕೊರತೆ ಹಾಗೂ ದೇಹದಲ್ಲಿ ಗ್ಲೋಕೋಸ್ ಹೆಚ್ಚಿಸಲು ಸಕ್ಕರೆ-ಉಪ್ಪು ಮಿಶ್ರಿತ ನೀರು ಪರಿಣಾಮಕಾರಿ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಬಿ 12 ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ದೇಹಕ್ಕೆ ಶಕ್ತಿ ನೀಡಿ ಆಯಾಸ ಕಡಿಮೆ ಮಾಡುತ್ತದೆ.