Pic Credit: pinterest
By Preeti Bhat
15 July 2025
ನಮ್ಮ ಒತ್ತಡದ ಜೀವನಶೈಲಿಯಿಂದ ಮುಕ್ತಿ ಪಡೆಯಲು ಆಗಾಗ ದೂರದ ಊರುಗಳಿಗೆ ಪ್ರಯಾಣ ಮಾಡುವುದು ಎಲ್ಲ ರೀತಿಯಲ್ಲಿಯೂ ಒಳ್ಳೆಯದು.
ಆದರೆ ದೀರ್ಘ ಪ್ರಯಾಣ ದೇಹದಲ್ಲಿ ನೋವು, ಅದರಲ್ಲಿಯೂ ಬೆನ್ನು ನೋವಿಗೆ ಕಾರಣವಾಗಬಹುದು. ಈ ರೀತಿ ನಿಮಗೂ ಆಗುತ್ತಾ?
ನೀವು ಕಾರು ಚಾಲನೆ ಮಾಡುವಾಗ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಬೆನ್ನು ನೋವಿನ ಸಮಸ್ಯೆಯೇ ಬರುವುದಿಲ್ಲ.
ಯಾವಾಗಲೂ ಕಾರು ಚಾಲನೆ ಮಾಡುವಾಗ ಸ್ಟೀರಿಂಗ್ ವೀಲ್ ನಿಂದ ಸರಿಯಾದ ಅಂತರವಿರಬೇಕು. ಇಲ್ಲವಾದಲ್ಲಿ ಹಿಂಭಾಗದಲ್ಲಿ ನೋವು ಉಂಟಾಗುತ್ತದೆ.
ಏರ್‌ಬ್ಯಾಗ್ ಕೆಲಸ ಮಾಡಲು, ನೀವು ಸ್ಟೀರಿಂಗ್ ವೀಲ್‌ನ ಮಧ್ಯಭಾಗದಿಂದ ಕನಿಷ್ಠ 25 ರಿಂದ 30 ಸೆಂಟಿಮೀಟರ್‌ಗಳ ಅಂತರವನ್ನು ಕಾಯ್ದುಕೊಳ್ಳಬೇಕು.
ಕೆಲವರು ಡ್ರೈವಿಂಗ್ ಸೀಟನ್ನು ತುಂಬಾ ಹಿಂದಕ್ಕೆ ಫೋಲ್ಡ್ ಮಾಡುತ್ತಾರೆ, ಆದರೆ ಯಾವುದೇ ಕಾರಣಕ್ಕೂ 10 ರಿಂದ 20 ಡಿಗ್ರಿಗಳಿಗಿಂತ ಹೆಚ್ಚು ಹಿಂದಕ್ಕೆ ಒರಗಬಾರದು.
ಚಾಲನೆ ಮಾಡುವಾಗ ಬರುವ ಬೆನ್ನು ನೋವನ್ನು ತಪ್ಪಿಸಲು, ನಿಮಗೆ ಆರಾಮದಾಯಕವಾಗುವ ಹಾಗೆ ನಿಮ್ಮ ಎತ್ತರವನ್ನು ಸಹ ಹೊಂದಿಸಿಕೊಳ್ಳಬೇಕು.
ನಿಮ್ಮ ಮೊಣಕಾಲುಗಳು ತುಂಬಾ ಕೆಳಗೆ ಹೋಗದಂತೆ ನೋಡಿಕೊಳ್ಳಿ. ಆಸನವನ್ನು ತುಂಬಾ ಎತ್ತರಕ್ಕೂ ಏರಿಸಬೇಡಿ, ಏಕೆಂದರೆ ಅದು ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು.