ಹೃದಯದ ಆರೋಗ್ಯ ಚೆನ್ನಾಗಿರಬೇಕಂದ್ರೆ ಈ ಆಹಾರ ನಿತ್ಯ ಸೇವಿಸಿ

Pic Credit: pinterest

By Sai Nanda

16 September  2025

ಹೃದಯ ಸಂಬಂಧಿ ಸಮಸ್ಯೆ

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಹೃದಯದ ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಹೃದಯಾಘಾತ ಸೇರಿದಂತೆ ಇತರ ಸಮಸ್ಯೆಗಳು ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿವೆ.

ಹೃದಯದ ಆರೋಗ್ಯ

ಹೀಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಲವು ಆಹಾರಗಳನ್ನು ಸೇವಿಸಬೇಕು ಎನ್ನುವ ಸಲಹೆಗಳನ್ನು ತಜ್ಞರು ನೀಡುತ್ತಾರೆ.

ಹಣ್ಣುಗಳ ಸೇವನೆ

ಪ್ರತಿದಿನ  ಪಾಲಕ್, ಕ್ಯಾರೆಟ್, ಬೆರ್ರಿಗಳು, ಸೇಬುಗಳು ಮತ್ತು ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

ಧಾನ್ಯಗಳನ್ನು ಸೇವಿಸಿ

ಧಾನ್ಯಗಳು ಫೈಬರ್‌ನಿಂದ ಸಮೃದ್ಧವಾಗಿದೆ. ಹೀಗಾಗಿ ಸಂಸ್ಕರಿಸಿದ ಧಾನ್ಯಗಳಿಗೆ ಬದಲು ಓಟ್ಸ್, ಬಾರ್ಲಿ, ಗೋಧಿ ಸೇರಿದಂತೆ ಆರೋಗ್ಯಕರ ಧಾನ್ಯಗಳನ್ನು ಸೇವಿಸಿ.

ಕೊಬ್ಬಿನ ಮೀನು

ಸಾಲ್ಮನ್, ಸಾರ್ಡೀನ್, ಮತ್ತು ಮ್ಯಾಕೆರೆಲ್‌ನಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಡಾರ್ಕ್ ಚಾಕೊಲೇಟ್

ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ.

ಹಾಲಿನ ಉತ್ಪನ್ನಗಳು

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳನ್ನು ಸೇರಿಸಿಕೊಳ್ಳಿ. ಆಲಿವ್ ಎಣ್ಣೆ, ಅವಕಾಡೊಗಳು, ಬೀಜಗಳನ್ನು ಸೇವಿಸಿ.

ಕಡಿಮೆ ಉಪ್ಪು ಸೇವನೆ

ಕೆಲವರು ಹೆಚ್ಚು ಉಪ್ಪಿನಿಂದ ಕೂಡಿದ ಆಹಾರವು  ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಉತ್ತಮ ಹೃದಯದ ಆರೋಗ್ಯಕ್ಕೆ ಮಸಾಲೆಗಳು ಹಾಗೂ  ಉಪ್ಪನ್ನು ಕಡಿಮೆ ಸೇವಿಸಿ.