ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳನ್ನ ಸೇವನೆ ಮಾಡಿ!

Pic Credit: pinterest

By Preeti Bhat

6 August 2025

ಕಣ್ಣುಗಳ ಆರೋಗ್ಯ

ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.

ಬೀಟಾ ಕ್ಯಾರೋಟಿನ

ಗಜರಿ ಅಥವಾ ಕ್ಯಾರೆಟ್‌ನಲ್ಲಿ ಹೆಚ್ಚಿನ ಮಟ್ಟದ ಬೀಟಾ ಕ್ಯಾರೋಟಿನ್ ಎಂಬ ಅಂಶವಿದ್ದು, ಇದು ಕಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಪಾಲಕ್  ಸೊಪ್ಪು

ಪಾಲಕ್  ಸೊಪ್ಪು ವಿಟಮಿನ್ ಎ ಮತ್ತು ಸಿಯಿಂದ ಸಮೃದ್ಧವಾದ್ದು ಕಣ್ಣುಗಳ ಉರಿಯೂತದಿಂದ ರಕ್ಷಿಸುತ್ತದೆ. ಕಿತ್ತಳೆ ಹಣ್ಣು ಕೂಡ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಟೊಮೆಟೊ

ಟೊಮೆಟೊದಲ್ಲಿರುವ ಲೈಕೋಪೀನ್ ಎಂಬ ವಸ್ತುವು ಕಣ್ಣಿನ ಕೋಶಗಳನ್ನು ಹಾನಿಕಾರಕ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಈ ತರಕಾರಿ ಕಣ್ಣುಗಳಿಗೆ ತುಂಬಾ ಒಳ್ಳೆಯದು.  

ಸಿಹಿ ಗೆಣಸು

ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಸಿಹಿ ಗೆಣಸುಗಳು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ರಾತ್ರಿ ಕಂಡುಬರುವಂತಹ ದೃಷ್ಟಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತವೆ.

ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ ಜೊತೆಗೆ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಿ.

ವಾಲ್ನಟ್ಸ್

ವಾಲ್ನಟ್ಸ್ ಗಳು ಕಣ್ಣಿನ ಕೋಶಗಳಿಗೆ ತೇವಾಂಶವನ್ನು ಒದಗಿಸುತ್ತವೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳನ್ನು ತಡೆಯುವುದಕ್ಕೆ ಸಹಾಯ ಮಾಡುತ್ತದೆ.

ಮೊಟ್ಟೆ

ಮೊಟ್ಟೆಗಳಲ್ಲಿ ಕಂಡುಬರುವ ಲುಟೀನ್ ಮತ್ತು ಸತುವು ಕಣ್ಣಿನ ಮಧ್ಯ ಭಾಗದಲ್ಲಿರುವ ಕೋಶಗಳನ್ನು ರಕ್ಷಿಸುತ್ತದೆ, ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.