Pic Credit: pinterest
By Preeti Bhat
29 May 2025
ಚರ್ಮದ ಮೇಲೆ ಕೆಂಪು ಗುಳ್ಳೆಯಾಗಿ ಅದರಲ್ಲಿ ಕೀವು ತುಂಬಿಕೊಳ್ಳುವುದನ್ನು ಕುರ ಎನ್ನಲಾಗುತ್ತದೆ.
ಇದು ಆದ ಸಂದರ್ಭದಲ್ಲಿ ನಡೆದಾಡಲು ಅಥವಾ ಕುಳಿತುಕೊಳ್ಳಲು ಕಷ್ವವಾಗುತ್ತದೆ. ಕೆಲವರಿಗೆ ಈ ನೋವಿನಿಂದ ಜ್ವರವೂ ಬರಬಹುದು.
ಕುರು ಕಂಡು ಬಂದರೆ ಮೊದಲು ಯಾವುದಾದರೂ ಹೂವಿನ ಮೊಗ್ಗನ್ನು ಅರೆದು ಆ ಕುರುವಿನ ಮೇಲೆ ಹಚ್ಚಿ.
ಕುರು ಆದಾಗ ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ ಕುರುವಾದ ಜಾಗದಲ್ಲಿ ಹಚ್ಚಿದರೆ ಒಂದೆರಡು ದಿನದಲ್ಲಿ ನೋವು, ಗುಳ್ಳೆ ಎರಡೂ ಕೂಡ ಶಮನವಾಗುತ್ತದೆ.
ಕುರು ಆದವರು ಬೇವಿನ ಎಲೆಗಳ ಜ್ಯೂಸ್ ತಯಾರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್ ಸೇವನೆ ಮಾಡಬಹುದು ಇದು ಕಲ್ಮಶವನ್ನು ಹೊರಹಾಕುತ್ತದೆ.
ಕುರು ಆದಾಗ ಬಸಳೆ ಸೊಪ್ಪನ್ನು ಅರೆದು ಹಚ್ಚುವುದರಿಂದಲೂ ಕೂಡ ನೋವು, ಗುಳ್ಳೆ ಎರಡೂ ಕಡಿಮೆಯಾಗುತ್ತದೆ.
ಹಾಗಲಕಾಯಿ ನಮ್ಮ ರಕ್ತ ಶುದ್ಧೀಕರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಕುರು ಉಂಟಾಗುವುದಿಲ್ಲ.
ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ಇದು ದೇಹದಲ್ಲಿನ ಕಲ್ಮಶಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತದೆ.