Pic Credit: pinterest
By Preeti Bhat
25 July 2025
ಮೂಲವ್ಯಾಧಿ ಮತ್ತು ಫಿಸ್ಟುಲಾಗಳಂತಹ ಸಮಸ್ಯೆಗಳಿರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಅವರು ಕೆಲವು ಆಹಾರಗಳನ್ನು ಸೇವಿಸಬಾರದು.
ಡಾ. ಸಲೀಲ್ ಯಾದವ್ ತಿಳಿಸಿರುವ ಮಾಹಿತಿ ಪ್ರಕಾರ, ಮಸಾಲೆ ಪದಾರ್ಥಗಳು ಹೆಚ್ಚಿರುವ ಆಹಾರ ಮತ್ತು ಕೆಂಪು ಮಾಂಸವನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
ಕೆಫೀನ್ ಅಧಿಕವಾಗಿರುವ ಪಾನೀಯಗಳನ್ನು ಆದಷ್ಟು ತಪ್ಪಿಸಬೇಕು. ಅಂದರೆ, ಚಹಾ ಅಥವಾ ಕಾಫಿಯಂತಹ ಪಾನೀಯಗಳಿಂದ ದೂರವಿರಬೇಕು.
ಮೂಲವ್ಯಾಧಿ ಇರುವವರು ಆಲ್ಕೋಹಾಲ್‌ನಿಂದ ದೂರವಿರುವುದು ಉತ್ತಮ. ಇಲ್ಲವಾದಲ್ಲಿ ಇದು ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ.
ಚಿಪ್ಸ್ ಮತ್ತು ಬಿಸ್ಕತ್ತುಗಳಂತಹ ಆಹಾರಗಳನ್ನು ಸಹ ತಪ್ಪಿಸಬೇಕು. ಅವುಗಳಲ್ಲಿ ಫೈಬರ್ ಅಂಶ ಕಡಿಮೆ ಇರುವುದರಿಂದ ಅವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ.
ಬಿಳಿ ಬ್ರೆಡ್, ಚೀಸ್, ಕ್ರೀಮ್, ಪನೀರ್ ಇತ್ಯಾದಿ ಆಹಾರಗಳನ್ನು ಸೇವಿಸಬಾರದು. ಜೊತೆಗೆ ಉಪ್ಪಿನಕಾಯಿಗಳನ್ನು ಸೇವಿಸಬಾರದು.
ವೈದ್ಯರು ಹೇಳುವ ಪ್ರಕಾರ, ಮೂಲವ್ಯಾಧಿ ಇರುವವರು ಬಾಳೆಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಅವು ಮಲಬದ್ಧತೆಗೆ ಕಾರಣವಾಗಬಹುದು
ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದರ ಜೊತೆಗೆ ಜೀರ್ಣಕ್ರಿಯೆಗೆ ಅಗತ್ಯವಾದ ಫೈಬರ್ ಅನ್ನು ಒದಗಿಸುವುದು ಬಹಳ ಮುಖ್ಯವಾಗಿದೆ.