ಅಲ್ಸರ್ ಸಮಸ್ಯೆಗೆ ಈ ರೀತಿ ಮಾಡಿ, ತಕ್ಷಣ ಪರಿಹಾರ ಸಿಗುತ್ತೆ

Pic Credit: pinterest

By Preeti Bhat

19 June 2025

ಬಾಯಿಯಲ್ಲಿ ಹುಣ್ಣು

ಬಾಯಿಯಲ್ಲಿ ಹುಣ್ಣಾದರೆ ಎಷ್ಟು ಕಷ್ಟವಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಮಾತನಾಡುವುದಕ್ಕೆ, ಊಟ ಮಾಡುವುದಕ್ಕೆ ಬೇರೆ ಏಕೆ ನೀರು ಕುಡಿಯುವಾಗಲೂ ಕಷ್ಟವಾಗುತ್ತದೆ.

ಆಮ್ಲೀಯತೆ

ಬಾಯಲ್ಲಿ ಆಗಾಗ ಈ ರೀತಿ ಹುಣ್ಣು ಕಾಣಿಸಿಕೊಳ್ಳುವುದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿರುತ್ತದೆ ಅಥವಾ ಹೆಚ್ಚಿನ ಆಮ್ಲೀಯತೆಯಿಂದಲೂ ಈ ರೀತಿ ಬಾಯಿ ಹುಣ್ಣುಗಳು ಉಂಟಾಗಬಹುದು.

ಬಿಸಿನೀರು

ಬಾಯಿಯಲ್ಲಿ ಹುಣ್ಣುಗಳು ಕಂಡುಬಂದಾಗ, ಆ ಜಾಗವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ಹುಣ್ಣುಗಳಿಗೆ ತ್ವರಿತ ಪರಿಹಾರ ನೀಡುತ್ತದೆ.  

ಜೇನುತುಪ್ಪ

ಬಾಯಿಯಲ್ಲಿ ಹುಣ್ಣುಗಳಾದಾಗ ಮೊಸರು, ಜೇನುತುಪ್ಪ, ಅರಿಶಿನ, ತುಳಸಿ ಎಲೆಗಳು, ಏಲಕ್ಕಿ, ಸೋಂಪು, ಸಕ್ಕರೆ ಪಾಕ, ಕೊತ್ತಂಬರಿ ಬೀಜಗಳನ್ನು ಹೆಚ್ಚಾಗಿ ಬಳಸಬೇಕು.

ಉಪ್ಪು ನೀರು

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೇಬಲ್ ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಅಲ್ಸರ್ ನಿಂದ ಬೇಗ ಮುಕ್ತಿ ಪಡೆಯಬಹುದು.

ಮಸಾಲೆ ಪದಾರ್ಥ

ಅಲ್ಸರ್ ಆದಾಗ ಸಾಧ್ಯವಾದಷ್ಟು ಮಸಾಲೆ ಪದಾರ್ಥಗಳನ್ನು ಬಳಸಿದ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಇದು ಕಿರಿಕಿರಿ ಮತ್ತು ಉರಿಯನ್ನು  ಹೆಚ್ಚಿಸುತ್ತದೆ.

ಸಿಟ್ರಸ್ ಹಣ್ಣು

ಅಲ್ಸರ್ ಆದಾಗ ಸಿಟ್ರಸ್ ಆಮ್ಲ ಹೆಚ್ಚಾಗಿರುವ ಹಣ್ಣುಗಳು ಅಂದರೆ ನಿಂಬೆ, ಕಿತ್ತಳೆ, ದ್ರಾಕ್ಷಿ ಇಂತಹ ಹಣ್ಣುಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ.

ಐಸ್ ಕ್ರೀಂ

ಬಾಯಲ್ಲಿ ಅಲ್ಸರ್ ಆಗಿರುವವರು ಬಿಸಿಯಾದ ಸೂಪ್ ಕುಡಿಯುವುದು ಅಥವಾ ತಂಪಾದ ಕೂಲ್ ಡ್ರಿಂಕ್ಸ್ ಅಥವಾ ಐಸ್ ಕ್ರೀಂ ಸೇವಿಸುವುದು ಮಾಡಬಾರದು.