Pic Credit: gettyimages
By Preeti Bhat
06 May 2025
ಹುಡುಗರಿಗೆ ಮೀಸೆ ಗಡ್ಡ ಬರುವುದು ಸಹಜ. ಆದರೆ ಹುಡುಗಿಯರಿಗೆ ಈ ರೀತಿ ಆದರೆ ಯಾರಿಗಾದರೂ ಮುಜುಗರ ಆಗುತ್ತದೆ.
ಕೆಲವು ಹುಡುಗಿಯರಲ್ಲಿ ಈ ರೀತಿ ಸಮಸ್ಯೆ ಕಂಡುಬರುತ್ತದೆ. ಅದಕ್ಕಾಗಿಯೇ ಅವರು ಪ್ರತಿ ತಿಂಗಳು ಹುಡುಗರಂತೆ ಶೇವ್ ಮಾಡಿಕೊಳ್ಳುತ್ತಾರೆ.
ಹಾಗಾದರೆ ಈ ರೀತಿ ಸಮಸ್ಯೆ ಕಂಡು ಬರಲು ಕಾರಣವೇನು? ಇದನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಈ ಬಗ್ಗೆ ಡಾ. ಐಶ್ವರ್ಯಾ ಗೌಡ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ.
ಅವರು ನೀಡಿರುವ ಮಾಹಿತಿ ಪ್ರಕಾರ, ಅನೇಕ ಮಹಿಳೆಯರಿಗೆ ಮೇಲಿನ ತುಟಿ ಮತ್ತು ಗಲ್ಲದಲ್ಲಿ ಕೂದಲಿನ ಬೆಳವಣಿಗೆಯ ಸಮಸ್ಯೆ ಇರುತ್ತದೆ.
ದೇಹದಲ್ಲಿ ಆಂಡ್ರೊಜೆನ್ ಮಟ್ಟ ಹೆಚ್ಚಾಗಿರುವುದರಿಂದ ಈ ರೀತಿ ಸಮಸ್ಯೆಯಾಗುತ್ತೆ. ಇದನ್ನು ಕಡಿಮೆ ಮಾಡಿಕೊಂಡರೆ ಈ ಸಮಸ್ಯೆ ತಡೆಯಬಹುದು.
ಒಂದು ಚಮಚ ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ಚಕ್ಕೆ ಪುಡಿಯನ್ನು ಸೇರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ.
ಪ್ರತಿನಿತ್ಯ ಈ ನೀರನ್ನು ದಿನದಲ್ಲಿ ಒಂದು ಅಥವಾ ಎರಡು ಬಾರಿ, ಒಂದು ತಿಂಗಳು ನಿರಂತರವಾಗಿ ಸೇವನೆ ಮಾಡಬೇಕು.